My Site
Hero BannerHero Banner

About Us

Colorado Kannada Koota (CKK) is a vibrant community organization dedicated to preserving and promoting Kannada language, culture, and traditions in Colorado.

Who We Are

Colorado Kannada Koota (CKK), established in 1975, is a non-profit organization dedicated to the needs of the Kannada speaking community in Colorado.

During the past 50+ years, Colorado Kannada Koota has become a trusted name in the community, organizing cultural events, festivals, and educational programs that bring together families and individuals who share a passion for Kannada language and heritage.

We provide a platform for Kannadigas to connect, celebrate our rich cultural traditions, and pass on our heritage to the next generation. From annual festivals like Mile-Hi Sangamam to our Kannada Shaale language school, CKK offers numerous opportunities for community engagement.

Who We Are
Our Vision

Our Vision

To be the leading hub for Kannada culture, heritage, and community in Colorado, where every Kannadiga feels connected, valued, and at home. Our vision is to create a vibrant community where children grow up proud of their heritage, traditions are celebrated across generations, and Karnataka's rich culture continues to thrive. By fostering unity, inclusivity, and cultural excellence, we aspire to strengthen our community, inspire future generations, and showcase the richness of Kannada heritage across Colorado.

Our Vision
Our Purpose

Our Purpose

To promote the Kannada language, culture, and heritage in Colorado while creating a strong community for families to connect and celebrate their roots. Our purpose is built around four key pillars: celebrating rich Kannada cultural traditions, supporting language education through our Kannada Shaale, connecting community members through events and programs, and preserving our heritage for future generations. Through our various programs and initiatives, we strive to create meaningful experiences that strengthen the bond between Kannadigas living in Colorado.

Our Purpose
Our Introduction

ನಮ್ಮ ಪರಿಚಯ

ಕೊಲೊರಾಡೋ ಕನ್ನಡ ಕೂಟವು ಕೊಲೊರಾಡೋ ಕನ್ನಡಿಗರ ಅಗತ್ಯಗಳನ್ನು ಪೂರೈಸುವ ಲಾಭರಹಿತ ಸಂಸ್ಥೆಯಾಗಿದ್ದು, ಕೊಲೊರಾಡೋದಲ್ಲಿ ನೆಲೆಸಿರುವ ಕನ್ನಡಿಗರಿಗೆ ಎಲ್ಲಾ ರೀತಿಯ ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ತಳಹದಿಯಂತೆ ಕಾರ್ಯನಿರ್ವಹಿಸುತ್ತದೆ. ವಯಸ್ಕರಿಗೆ ಮತ್ತು ಇಲ್ಲೇ ಹುಟ್ಟಿ ಬೆಳೆಯುತ್ತಿರುವ ಯುವಕರಿಗೆ ಸಾಂಸ್ಕೃತಿಕ ಚಟುವಟಿಕೆಗಳನ್ನು ಉತ್ತೇಜಿಸುವುದು ಮತ್ತು ವಿವಿಧ ಮಾನವೀಯ ಕಾರಣಗಳನ್ನು ಬೆಂಬಲಿಸುವುದು ಸಂಘಟನೆಯ ಉದ್ದೇಶವಾಗಿದೆ.

ಕೊಲೊರಾಡೋ ಕನ್ನಡ ಕೂಟವು ಕರುನಾಡ ಹಬ್ಬಗಳ ಪ್ರಜ್ಞೆಯನ್ನು ವಾಡಿಕೆಯ ಜೀವನಶೈಲಿಗೆ ತರಲು ಮೂರು ಪ್ರಮುಖ ಉತ್ಸವಗಳಾದ ಯುಗಾದಿ, ಗಣೇಶ ಚತುರ್ಥಿ ಮತ್ತು ದೀಪಾವಳಿ-ರಾಜ್ಯೋತ್ಸವವನ್ನು ಪ್ರತಿ ವರ್ಷ ಉತ್ಸಾಹಭರಿತ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಯೋಜಿಸುತ್ತದೆ. ಇದರ ಜೊತೆಗೆ ರಾಕೀಸ್ ಚಾರಣ, ವಾರ್ಷಿಕ ವನಭೋಜನ, ಬಿಡಾರ, ಸಾಹಿತ್ಯೋತ್ಸವ, ಕ್ರೀಡಾ ಚಟುವಟಿಕೆ, ತಾಯಿ-ತಂದೆಯರ ದಿನಾಚರಣೆ ಮತ್ತು ದಾನ ನಿಧಿ ಸಂಗ್ರಹಣೆ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ.

ಈ ಸಂದರ್ಭಗಳು ಕನ್ನಡ ಜನರಿಗೆ ತಮ್ಮದೇ ಸಮುದಾಯದ ಇತರರನ್ನು ಭೇಟಿ ಮಾಡಲು ಒಂದು ವೇದಿಕೆಯನ್ನು ಕಲ್ಪಿಸುತ್ತದೆ. ಈ ಉತ್ಸವಗಳು ಅದರೊಂದಿಗೆ ತರುವ ಅನೇಕ ಮೌಲ್ಯಗಳನ್ನು ಬೆಳೆಸಲು ಮಕ್ಕಳಿಗೆ ಇದು ಒಂದು ಒಳ್ಳೆಯ ಅವಕಾಶವನ್ನು ಒದಗಿಸುತ್ತದೆ. ಪೋಷಕರು ತಮ್ಮನ್ನು ಮತ್ತು ತಮ್ಮ ಮಕ್ಕಳನ್ನು ವಿವಿಧ ಕೂಟದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಮತ್ತು ತಮ್ಮ ಮಕ್ಕಳನ್ನು ಕರ್ನಾಟಕದ ಶ್ರೀಮಂತ ಸಂಸ್ಕೃತಿ ಮತ್ತು ಸಂಪ್ರದಾಯಗಳಿಗೆ ಒಡ್ಡಲು ಅವಕಾಶವನ್ನು ಪಡೆಯುತ್ತಾರೆ.

ಕೊಲೊರಾಡೋ ಕನ್ನಡ ಕೂಟದ ಐವತ್ತು ವರ್ಷಗಳ ಸುದೀರ್ಘ ಇತಿಹಾಸವು ಸಂಪೂರ್ಣವಾಗಿ ಕನ್ನಡ ಕೂಟದ ಉದ್ದೇಶಗಳನ್ನು ಉಳಿಸಿಕೊಳ್ಳಲು ಮತ್ತು ಬೆಳೆಸಲು ಸ್ವಯಂಪ್ರೇರಣೆಯಿಂದ ಜವಾಬ್ದಾರಿಗಳನ್ನು ತೆಗೆದುಕೊಂಡ ಸಮರ್ಪಿತ ಜನರಿಗೆ ಕಾರಣವಾಗಿದೆ. ಕೊಲೊರಾಡೋದ ಪ್ರತಿಯೊಬ್ಬ ಕನ್ನಡಿಗನ ಪಾಲ್ಗೊಳ್ಳುವಿಕೆ ಕನ್ನಡದ ಸಂಸ್ಕೃತಿ ಮತ್ತು ಸಮುದಾಯದ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಉತ್ಕೃಷ್ಟಗೊಳಿಸುತ್ತದೆ.

ಕೊಲೊರಾಡೋ ಕನ್ನಡ ಕೂಟ ‘ಅಕ್ಕ’, ‘ನಾವಿಕ’, ಮತ್ತು ‘ಕನ್ನಡ ಸಾಹಿತ್ಯ ಪರಿಷತ್ತು’ ಸಂಸ್ಥೆಗಳೊಂದಿಗೆ ಸಂಯೋಜಿತವಾಗಿದ್ದು, ಕೂಟದ ಸದಸ್ಯರು ಈ ಸಂಸ್ಥೆಗಳ ‘ವಿಶ್ವ ಕನ್ನಡ ಸಮ್ಮೇಳನ’ಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ.

ನಮ್ಮ ಪರಿಚಯ

Our Executive Team

ಶಶಿಕಿರಣ್ ಕುಣಿಗಲ್

ಶಶಿಕಿರಣ್ ಕುಣಿಗಲ್

ಅಧ್ಯಕ್ಷರು

Shashikiran Kunigal - President

ಶಶಿಕಿರಣ್ ಅವರು ಬೆಂಗಳೂರಿನಲ್ಲಿ ಜನಿಸಿ, ಮೈಸೂರಿನಲ್ಲಿ ಬೆಳೆದು, ಡೆನ್ವರ್ ಪ್ರದೇಶದಲ್ಲಿ ಇಪ್ಪತ್ತೇಳು ವರ್ಷಗಳಿಂದ ತಮ್ಮ ಪತ್ನಿ ಹಾಗೂ ಮೂವರು ಸುಪುತ್ರಿಯರೊಂದಿಗೆ ವಾಸಿಸುತ್ತಿದ್ದಾರೆ. ಅವರು ‘ದೂರಸಂಪರ್ಕ ನಿರ್ವಹಣೆ’ಯಲ್ಲಿ ಸ್ನಾತಕೋತ್ತರ ಪದವಿ ಮತ್ತು ‘ಕಂಪ್ಯೂಟರ್ ಸೈನ್ಸ್ ಮತ್ತು ತಂತ್ರಜ್ಞಾನ’ದಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದಿದ್ದಾರೆ. ಅವರು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮೂವತ್ತು ವರ್ಷಗಳಿಂದ ವಿವಿಧ ತಾಂತ್ರಿಕ ಮತ್ತು ನಾಯಕತ್ವದ ಪಾತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಹವ್ಯಾಸಕ್ಕಾಗಿ ತಮ್ಮ ಕುಟುಂಬದೊಂದಿಗೆ ವಿಶ್ವ ಪರ್ಯಟನೆ ಹಾಗೂ ಪರಿಶೋಧನೆಗಾಗಿ ಈಗಾಗಲೇ ಭಾರತ, ನೇಪಾಳ, ಟಿಬೆಟ್, ನ್ಯೂಜ಼ೀಲ್ಯಾಂಡ್, ಅಮೇರಿಕ, ಸ್ವಿಟ್ಸರ್ಲ್ಯಾಂಡ್ ಹಾಗೂ ಆಫ್ರಿಕಾ ಸೇರಿದಂತೆ ವಿಶ್ವದ ನಾನಾ ಭಾಗಗಳಲ್ಲಿ ಪರ್ವತಾರೋಹಣ ಮಾಡಿದ್ದಾರೆ. ಶಶಿಕಿರಣ್ ಅನೇಕ ಸಾಂಸ್ಕೃತಿಕ ಮತ್ತು ದತ್ತಿ ಕಾರ್ಯಕ್ರಮಗಳನ್ನು ಆಯೋಜಿಸಿ, ಸಮಾನ ಮನಸ್ಕ ಉತ್ಸಾಹಿ ಕನ್ನಡ ಸ್ನೇಹಿತರೊಂದಿಗೆ ಸೇರಿ ಜನಪ್ರಿಯ ಕರುನಾಡ ಗಣ್ಯರನ್ನು ಹಾಗೂ ಕಲಾವಿದರನ್ನು ಕೊಲೊರಾಡೋಗೆ ಕನ್ನಡ ಕಾರ್ಯಕ್ರಮಗಳಿಗೆ ಕರೆತರುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. "ಕೊಲೊರಾಡೋ ಕನ್ನಡ ಕೂಟದ ಅಧ್ಯಕ್ಷನಾಗಿ ಕನ್ನಡ ಬಳಗದ ಸೇವೆ ಸಲ್ಲಿಸುವ ಅವಕಾಶ ಒದಗಿರುವುದು ನನಗೆ ಅತ್ಯಂತ ಗೌರವದ ವಿಚಾರ. ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು ತದನಂತರ ಅಮೇರಿಕಾದಲ್ಲಿ ಸೇರಿದ ನಮ್ಮ ಮಂತ್ರ ಒಂದೇ - ನಾವು ಕನ್ನಡಿಗರು, ಕನ್ನಡ ಭಾಷೆ ಮತ್ತು ಸಂಸ್ಕೃತಿ ನಮ್ಮ ಉಸಿರು. ನನ್ನ ಅಧ್ಯಕ್ಷತೆಯಲ್ಲಿ ಕನ್ನಡ ಸೇವೆಗಯ್ಯಲು ಕೊಲೊರಾಡೋದ ಬೇರೆ ಬೇರೆ ನಗರಗಳಿಂದ ಕಂಕಣಬದ್ಧ ಕನ್ನಡಿಗರನ್ನು ಆಯ್ದು ಹೊಸ ಕಾರ್ಯಕಾರಿ ಸಮಿತಿಯನ್ನು ಒಟ್ಟುಗೂಡಿಸಿದ್ದೇನೆ. ಇವರೆಲ್ಲರ ಸ್ಪೂರ್ತಿ ಮತ್ತು ಉತ್ತೇಜನದಿಂದ ನಮ್ಮ ಕೆಲಸವು ಕನ್ನಡಿಗರಲ್ಲಿ ಅಭಿಮಾನ ಮತ್ತು ಒಗ್ಗಟ್ಟು ಬೆಳೆಸುತ್ತದೆ. ನಾವೆಲ್ಲರೂ ಕೈಗೂಡಿಸಿ ಕನ್ನಡಾಂಬೆಯ ಸೇವೆ ಮಾಡೋಣ, ಬನ್ನಿ ನಮ್ಮೊಂದಿಗೆ ಕೈ ಜೋಡಿಸಿ” - ಎನ್ನುತ್ತಾರೆ ಶಶಿಕಿರಣ್.

“ಕೊಲೊರಾಡೋ ಕನ್ನಡ ಕೂಟದ ಅಧ್ಯಕ್ಷನಾಗಿ ಕನ್ನಡ ಬಳಗದ ಸೇವೆ ಸಲ್ಲಿಸುವ ಅವಕಾಶ ಒದಗಿರುವುದು ನನಗೆ ಅತ್ಯಂತ ಗೌರವದ ವಿಚಾರ. ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು ತದನಂತರ ಅಮೇರಿಕಾದಲ್ಲಿ ಸೇರಿದ ನಮ್ಮ ಮಂತ್ರ ಒಂದೇ - ನಾವು ಕನ್ನಡಿಗರು, ಕನ್ನಡ ಭಾಷೆ ಮತ್ತು ಸಂಸ್ಕೃತಿ ನಮ್ಮ ಉಸಿರು.”

ವಾಸುದೇವ ರಾವ್

ವಾಸುದೇವ ರಾವ್

ಉಪಾಧ್ಯಕ್ಷರು

Vasudeva Rao - Vice President

ವಾಸು ಚಿತ್ರದುರ್ಗದಲ್ಲಿ ಜನಿಸಿ, ನಂತರ ಬೆಂಗಳೂರು ನಗರದಲ್ಲಿ ನೆಲೆಸಿ, ಪ್ರಸ್ತುತ ಡೆನ್ವರ್, ಕೊಲೊರಾಡೋದಲ್ಲಿ ಐಟಿ ಕ್ಷೇತ್ರದಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದಾರೆ. ವಾಸು ಹಲವಾರು ಸಂಘ - ಸಂಸ್ಥೆಗಳಲ್ಲಿ, ಕನ್ನಡ ಸಂಘಗಳಲ್ಲಿ ಕಾರ್ಯ ನಿರ್ವಹಿಸಿರುವ ಅನುಭವ ಹೊಂದಿದ್ದು, ಕೊಲೊರಾಡೋ ಕನ್ನಡ ಕೂಟದಲ್ಲಿ ಈ ಅನುಭವಗಳನ್ನು ಹಂಚಿಕೊಳ್ಳಲು ಹಾಗೂ ಕಾರ್ಯರೂಪಕ್ಕೆ ತರಲು ಬಯಸುತ್ತಾರೆ. “ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರೋತ್ಸಾಹಿಸುವುದು ನನ್ನ ಹೃದಯಕ್ಕೆ ಹತ್ತಿರವಾಗಿದೆ. ನನ್ನಲ್ಲಿ ನವೀನ ತಂತ್ರಜ್ಞಾನ ಮತ್ತು ಪರಂಪರೆಯ ಮಿಲನದ ಒಂದು ವಿಶಿಷ್ಟ ಸಂಯೋಜನೆ ಇದೆ. ಅದನ್ನು ಕನ್ನಡಕ್ಕಾಗಿ ಬಳಸುವ ಬಯಕೆ. ಕೊಲೊರಾಡೋ ಕನ್ನಡ ಕೂಟದ ಭಾಗವಾಗಿರುವುದು ನನಗೆ ಹೆಮ್ಮೆ ಮತ್ತು ಸಂತೋಷವನ್ನು ತಂದಿದೆ. ನಮ್ಮ ಸಮುದಾಯದೊಂದಿಗೆ ಕನ್ನಡವನ್ನು ಹರಡಲು ಹಾಗೂ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸಲು ಇದು ಒಳ್ಳೆಯ ವೇದಿಕೆಯಾಗಿದೆ. ಇದು ನನ್ನ ಕನ್ನಡ ಪ್ರೀತಿ ಮತ್ತು ಸಮಾಜ ಸೇವೆಯ ಧ್ಯೇಯವನ್ನು ಮುನ್ನಡೆಸುವ ಒಂದು ಸುಂದರ ಅವಕಾಶ” - ಎನ್ನುತ್ತಾರೆ ವಾಸು.

“ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರೋತ್ಸಾಹಿಸುವುದು ನನ್ನ ಹೃದಯಕ್ಕೆ ಹತ್ತಿರವಾಗಿದೆ. ನನ್ನಲ್ಲಿ ನವೀನ ತಂತ್ರಜ್ಞಾನ ಮತ್ತು ಪರಂಪರೆಯ ಮಿಲನದ ಒಂದು ವಿಶಿಷ್ಟ ಸಂಯೋಜನೆ ಇದೆ. ಅದನ್ನು ಕನ್ನಡಕ್ಕಾಗಿ ಬಳಸುವ ಬಯಕೆ.”

ಮೀನಾ ಕಿಕ್ಕೇರಿ

ಮೀನಾ ಕಿಕ್ಕೇರಿ

ಕಾರ್ಯದರ್ಶಿಗಳು

Meena Kikkeri - Secretary

ಮೀನಾ ಡೆನ್ವರ್, ಕೊಲೊರಾಡೋದಲ್ಲಿ ಮೂವತ್ತು ವರ್ಷಗಳಿಗಿಂತಲೂ ಹೆಚ್ಚು ಕಾಲ ನೆಲೆಸಿದ್ದು, ಕೇವಲ ಎಂಟು-ಹತ್ತು ಕುಟುಂಬಗಳಿಂದ ನೂರಾರು ಕುಟುಂಬಗಳ ಕ್ರಮೇಣ ಪ್ರಗತಿಯನ್ನು ಕಣ್ಣಾರೆ ಕಂಡಿದ್ದಾರೆ. ಮೀನಾ ಅವರು ಉದ್ಯಮಶೀಲ ಹಿನ್ನೆಲೆಯಿಂದ ಬಂದವರಾಗಿದ್ದು, ಸಂವಹನೆ, ಸಂಘಟನೆ, ಸಕ್ರಿಯಗೊಳಿಸುವಿಕೆ ಮತ್ತು ಮುಂದಿನ ಪೀಳಿಗೆಯನ್ನು ಪ್ರೋತ್ಸಾಹಿಸುವಂತಹ ಬಹು ಅಂಶಗಳಲ್ಲಿ ಸಂಪನ್ಮೂಲವಾಗಬೇಕೆಂಬ ಬಯಕೆಯೊಂದಿಗೆ ಕೊಲೊರಾಡೋ ಕನ್ನಡ ಕೂಟದೊಂದಿಗೆ ತಮ್ಮನ್ನು ತಾವು ತೊಡಗಿಸಿಗೊಂಡಿದ್ದಾರೆ. “ನಮ್ಮ ಮುಂದಿನ ಪೀಳಿಗೆಗಳಿಗೆ ಅಭಿಮಾನ ಹಾಗೂ ಅವಕಾಶಗಳನ್ನು ಒದಗಿಸುವ ಒಂದು ವೇದಿಕೆಯಲ್ಲಿ ಭಾಗವಹಿಸಲು ಸದಾ ಸಿದ್ದ ಮತ್ತು ಈ ಸದಾವಕಾಶ ಕೊಡಿಸುವ ಕೊಲೊರಾಡೋ ಕನ್ನಡ ಕೂಟಕ್ಕೆ ಸದಾ ಚಿರಋಣಿ” - ಎನ್ನುತ್ತಾರೆ ಮೀನಾ.

“ನಮ್ಮ ಮುಂದಿನ ಪೀಳಿಗೆಗಳಿಗೆ ಅಭಿಮಾನ ಹಾಗೂ ಅವಕಾಶಗಳನ್ನು ಒದಗಿಸುವ ಒಂದು ವೇದಿಕೆಯಲ್ಲಿ ಭಾಗವಹಿಸಲು ಸದಾ ಸಿದ್ದ ಮತ್ತು ಈ ಸದಾವಕಾಶ ಕೊಡಿಸುವ ಕೊಲೊರಾಡೋ ಕನ್ನಡ ಕೂಟಕ್ಕೆ ಸದಾ ಚಿರಋಣಿ.”

Our Community

Committee Members

ರಾಮಚಂದ್ರ ಬೈಕಾಡಿTechnology Committee

ರಾಮಚಂದ್ರ ಬೈಕಾಡಿ

ತಂತ್ರಜ್ಞಾನ ಸಮಿತಿRamachandra Bykadi

ರಾಮಚಂದ್ರ ಅವರು ಮೂಲತಃ ಬೆಂಗಳೂರಿನವರಾಗಿದ್ದು, ಉಡುಪಿಯಲ್ಲಿ ಬೇರುಗಳನ್ನು ಹೊಂದಿದ್ದಾರೆ. ಅವರು ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಕೊಲೊರಾಡೋದ ಹೈಲ್ಯಾಂಡ್ಸ್ ರಾಂಚ್‌ನಲ್ಲಿ ವಾಸಿಸುತ್ತಾರೆ. ರಾಮ್ ಅವರು 'ಡೇಟಾ ಸೈನ್ಸ್ ಮತ್ತು ವ್ಯವಹಾರ'ದಲ್ಲಿ ಸ್ನಾತಕೋತ್ತರ ಪದವಿ ಹೊಂದಿದ್ದಾರೆ. ರಾಮ್ ಅವರು ಸ್ಯಾಂಡಲ್‌ವುಡ್ ಹಾಡುಗಳನ್ನು ಹಾಡಲು ಇಷ್ಟಪಡುತ್ತಾರೆ ಮತ್ತು ವಿಶೇಷವಾಗಿ ಡಾ. ರಾಜ್‌ಕುಮಾರ್ ಹಾಡುಗಳೆಂದರೆ ಪಂಚ-ಪ್ರಾಣ.

ಹರ್ಷ ಕುಮಾರ್Technology Committee

ಹರ್ಷ ಕುಮಾರ್

ತಂತ್ರಜ್ಞಾನ ಸಮಿತಿHarsha Kumar

ಹರ್ಷ ಹುಟ್ಟಿ ಬೆಳೆದದ್ದು ನಮ್ಮ ದೇವಸ್ಥಾನದ ಪಟ್ಟಣವಾದ ಉಡುಪಿಯಲ್ಲಿ. ಹರ್ಷ ತನ್ನ ಪತ್ನಿ ಮತ್ತು ಇಬ್ಬರು ಪುತ್ರಿಯರೊಂದಿಗೆ ಕೊಲೊರಾಡೋದ ಥಾರ್ನ್‌ಟನ್‌ನಲ್ಲಿ ವಾಸಿಸುತ್ತಿದ್ದಾರೆ. ಹರ್ಷ ಅವರು ನೃತ್ಯ ಮತ್ತು ನಾಟಕಗಳಲ್ಲಿ ಅಭಿನಯಿಸಲು ಇಷ್ಟಪಡುತ್ತಾರೆ ಮತ್ತು ಯಕ್ಷಗಾನದ ಬಗ್ಗೆ ಒಲವು ಹೊಂದಿದ್ದಾರೆ.

ಅಕ್ಷತಾ ಉಡುಪFood Committee

ಅಕ್ಷತಾ ಉಡುಪ

ಆಹಾರ ಸಮಿತಿAkshata Udupa

ಹರ್ಷ ಹುಟ್ಟಿ ಬೆಳೆದದ್ದು ನಮ್ಮ ದೇವಸ್ಥಾನದ ಪಟ್ಟಣವಾದ ಉಡುಪಿಯಲ್ಲಿ. ಹರ್ಷ ತನ್ನ ಪತ್ನಿ ಮತ್ತು ಇಬ್ಬರು ಪುತ್ರಿಯರೊಂದಿಗೆ ಕೊಲೊರಾಡೋದ ಥಾರ್ನ್‌ಟನ್‌ನಲ್ಲಿ ವಾಸಿಸುತ್ತಿದ್ದಾರೆ. ಹರ್ಷ ಅವರು ನೃತ್ಯ ಮತ್ತು ನಾಟಕಗಳಲ್ಲಿ ಅಭಿನಯಿಸಲು ಇಷ್ಟಪಡುತ್ತಾರೆ ಮತ್ತು ಯಕ್ಷಗಾನದ ಬಗ್ಗೆ ಒಲವು ಹೊಂದಿದ್ದಾರೆ.

ಮಾನಸಿ ಶಾಂಡಿಲ್ಯFood Committee

ಮಾನಸಿ ಶಾಂಡಿಲ್ಯ

ಆಹಾರ ಸಮಿತಿManasi Shandilya

ಮಾನಸಿ ಅವರು ಭಾವೋದ್ರಿಕ್ತ ಮತ್ತು ಕನ್ನಡಿಗ ಸಮುದಾಯದ ಬಗ್ಗೆ ಆಳವಾದ ಕಾಳಜಿ ಹೊಂದಿರುವ ವ್ಯಕ್ತಿ. ಭಾರತೀಯ (ಕನ್ನಡತಿ) ಮೂಲದ ಮೊದಲ ತಲೆಮಾರಿನ ಅಮೇರಿಕನ್ ಪ್ರಜೆಯಾಗಿ, ಅವರು ಅಮೇರಿಕನ್ ಮತ್ತು ಭಾರತೀಯ ಮೌಲ್ಯಗಳ ಉತ್ತಮ ಮಿಶ್ರಣವನ್ನು ಹೊಂದಿದ್ದಾರೆ.

ಶಾಮಲ ತಿಮ್ಮರಾಜುCultural Committee

ಶಾಮಲ ತಿಮ್ಮರಾಜು

ಸಾಂಸ್ಕೃತಿಕ ಸಮಿತಿShamala Thimmaraju

ಶ್ಯಾಮಲಾ ಅವರು 'ನಮ್ಮ ಬೆಂಗಳೂರು' ಸ್ಥಳೀಯರು ಮತ್ತು ಕನ್ನಡ ಭಾಷೆಯನ್ನು ತುಂಬಾ ಇಷ್ಟಪಡುವ ವ್ಯಕ್ತಿ. ಈ ಉತ್ಸಾಹಭರಿತ ನಗರದಲ್ಲಿ ಬೆಳೆದ ಅವರು ನಮ್ಮ ಶ್ರೀಮಂತ ಕನ್ನಡ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಪರಂಪರೆಯೊಂದಿಗೆ ಆಳವಾದ ಸಂಪರ್ಕ ಹೊಂದಿದ್ದಾರೆ.

ಬಾಬು ಹೇರುಂಡೆCultural Committee

ಬಾಬು ಹೇರುಂಡೆ

ಸಾಂಸ್ಕೃತಿಕ ಸಮಿತಿBabu Herunde

ಬಾಬು ಕಳೆದ ಇಪ್ಪತ್ತು ವರ್ಷಗಳಿಂದ ಕೊಲೊರಾಡೋ ಸ್ಪ್ರಿಂಗ್ಸ್‌ನಲ್ಲಿ ವಾಸಿಸುತ್ತಿದ್ದು, ಬಹಳ ವರ್ಷಗಳಿಂದ ಕೊಲೊರಾಡೋ ಕನ್ನಡ ಕೂಟ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಈ ಹಿಂದೆ ಕೊಲೊರಾಡೋ ಕನ್ನಡ ಶಾಲೆಯ ಅಧ್ಯಾಪಕರಾಗಿ ಮಕ್ಕಳಿಗೆ ಕನ್ನಡ ಪಾಠ ಕಲಿಸಿದ್ದಾರೆ.

ಅಕ್ಷತಾ ಕೃಷ್ಣಮೂರ್ತಿCultural Committee

ಅಕ್ಷತಾ ಕೃಷ್ಣಮೂರ್ತಿ

ಸಾಂಸ್ಕೃತಿಕ ಸಮಿತಿAkshata Krishnamurthy

ಅಕ್ಷತಾ ಮೈಸೂರಿನಲ್ಲಿ ಜನಿಸಿ, ಬೆಂಗಳೂರಿನಲ್ಲಿ ಬೆಳೆದು, ಸುಮಾರು ಹತ್ತು ವರ್ಷಗಳ ಹಿಂದೆ ಮದುವೆಯಾದ ನಂತರ ಅಮೇರಿಕಾಗೆ ಬಂದಿದ್ದಾರೆ. ಅವರ ಹವ್ಯಾಸಗಳಲ್ಲಿ ಹಾಡುಗಾರಿಕೆ, ನೃತ್ಯ ಮತ್ತು ಚಿತ್ರಕಲೆ ಸೇರಿವೆ. ಅವರು ಕರ್ನಾಟಕ ಸಂಗೀತದಲ್ಲಿ ತಮ್ಮ ಜೂನಿಯರ್ ಹಂತವನ್ನು ಪೂರ್ಣಗೊಳಿಸಿದ್ದಾರೆ.

ಶ್ರುತಿ ಬಾಲಕೃಷ್ಣನ್Literature Committee

ಶ್ರುತಿ ಬಾಲಕೃಷ್ಣನ್

ಸಾಹಿತ್ಯ ಸಮಿತಿShruthi Balakrishnan

ಶೃತಿ ಅವರು ತಮ್ಮ ಕುಟುಂಬದೊಂದಿಗೆ ಏಳು ವರ್ಷಗಳಿಂದ ಕೊಲೊರಾಡೋದಲ್ಲಿ ವಾಸಿಸುತ್ತಿದ್ದಾರೆ. ಅವರು ಪ್ರಸ್ತುತ ಕೊಲೊರಾಡೋ ರಾಜ್ಯದೊಂದಿಗೆ ಹಿರಿಯ ವ್ಯಾಪಾರ ವಿಶ್ಲೇಷಕರಾಗಿ ಕೆಲಸ ಮಾಡುತ್ತಿದ್ದಾರೆ.

ಹರೀಶ್ ಸುಬ್ರಾಯLiterature Committee

ಹರೀಶ್ ಸುಬ್ರಾಯ

ಸಾಹಿತ್ಯ ಸಮಿತಿHarish Subraya (Namapu)

ನಾಮಾಪು ಎಂಬ ಕಾವ್ಯನಾಮದ, ಹರೀಶ್ ಅವರು, ತನ್ನ ಹತ್ತನೇ ತರಗತಿಯವರೆಗೆ ಕನ್ನಡವನ್ನು ಪ್ರಾಥಮಿಕ ಬೋಧನಾ ಭಾಷೆಯಾಗಿ ಕಲಿತರು. 2022ರಲ್ಲಿ 'ಭಕ್ತಿಸಾಗರ' ಹಾಗೂ 'ಗೀತಾ ದರ್ಶನ' ಎಂಬ ಪುಸ್ತಕಗಳನ್ನು ಪ್ರಕಟಿಸಿದರು.

ಸುಮ ಶೇಖರ್Youth Committee

ಸುಮ ಶೇಖರ್

ಯುವ ಸಮಿತಿSuma Shekhar

ಸುಮ ಪೂರ್ಣಕಾಲಿಕ ಉದ್ಯೋಗಸ್ಥೆ ಮತ್ತು ಇಬ್ಬರು ಚುಟುಕು ಮಕ್ಕಳ ತಾಯಿ. ಅವರಿಗೆ ಅನ್ವೇಷಣೆ, ಸ್ವಯಂಸೇವೆ ಮತ್ತು ಸೃಜನಾತ್ಮಕತೆ ಎಂದರೆ ಬಹಳ ಪ್ರೀತಿ!

ಅರ್ಚನಾ ಭಟ್ಟYouth Committee

ಅರ್ಚನಾ ಭಟ್ಟ

ಯುವ ಸಮಿತಿArchana Bhatta

ಅರ್ಚನಾ ಮೂಲತಃ ನಮ್ಮ ಬೆಂಗಳೂರಿನವರಾಗಿದ್ದು, ತಮ್ಮ ಜೀವನದುದ್ದಕ್ಕೂ ಭಾರತೀಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸಮಿತಿಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅವರು ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ವೀಣೆ ನುಡಿಸುವುದರಲ್ಲಿ ಪ್ರಮಾಣೀಕರಿಸಲ್ಪಟ್ಟಿದ್ದಾರೆ.

ನಿತ್ಯ ಮದ್ದೋಡಿSports Committee

ನಿತ್ಯ ಮದ್ದೋಡಿ

ಕ್ರೀಡಾ ಸಮಿತಿNitya Maddodi

ನಿತ್ಯ ಕಳೆದ ಹತ್ತು ವರ್ಷಗಳಿಂದ ಕೊಲೊರಾಡೋದಲ್ಲಿ ವಾಸಿಸುತ್ತಿದ್ದಾರೆ. ಅವರು 'ಪಿಎಚ್‌ಡಿ ಕ್ಲಿನಿಕಲ್ ಸಂಶೋಧನಾ' ವಿಜ್ಞಾನಿ. ಕಾಲೇಜು ದಿನಗಳಲ್ಲಿ ಕ್ರೀಡಾಪಟುವಾಗಿದ್ದ ಇವರು ಈಗಲೂ ಅದೇ ಉತ್ಸಾಹವನ್ನು ಕಾಯ್ದುಕೊಂಡು ದೇಶಾದ್ಯಂತ ಹಲವಾರು ಮ್ಯಾರಥಾನ್‌ಗಳನ್ನು ಪೂರ್ಣಗೊಳಿಸಿದ್ದಾರೆ.

ಮೋಹನ್ ಕುಮಾರ್Sports Committee

ಮೋಹನ್ ಕುಮಾರ್

ಕ್ರೀಡಾ ಸಮಿತಿMohan Kumar

ಮೋಹನ್ ಅವರು ಚಿಕ್ಕಮಗಳೂರಿನಲ್ಲಿ ಹುಟ್ಟಿ ಬೆಳೆದವರು. ಅವರು ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಪ್ರಸ್ತುತ ಪಾರ್ಕರ್, ಕೊಲೊರಾಡೋದಲ್ಲಿ ವಾಸಿಸುತ್ತಿದ್ದಾರೆ. ಮೋಹನ್ ಅವರಿಗೆ ಕನ್ನಡ ಸಿನಿಮಾಗಳು ಹಾಗೂ ಹಳೆಯ ಹಾಡುಗಳನ್ನು ಕೇಳುವುದು ಬಹಳ ಇಷ್ಟ.

ಬೀರೇಂದ್ರ ಮೆಹ್ತಾSports Committee

ಬೀರೇಂದ್ರ ಮೆಹ್ತಾ

ಕ್ರೀಡಾ ಸಮಿತಿBirendra Mehta

ಬೀರೇಂದ್ರ ಮೆಹ್ತಾ ಅವರು ಬೆಂಗಳೂರಿಂದ ಬಂದು ಸೆಂಟೀನಿಯಲ್, ಕೊಲೊರಾಡೋದಲ್ಲಿ 2022ರಿಂದ ವಾಸಿಸುತಿದ್ದಾರೆ. ಅವರಿಗೆ ಕ್ರಿಕೆಟ್ ಹಾಗೂ ಬಾಡ್ಮಿಂಟನ್ ಆಟದ ಮೇಲೆ ಅಪಾರವಾದ ಆಸಕ್ತಿ ಇದೆ.

ರಮೇಶ್ ಭೀಮಪ್ಪMedia Committee

ರಮೇಶ್ ಭೀಮಪ್ಪ

ಮಾಧ್ಯಮ ಸಮಿತಿRamesh Bheemappa

ರಮೇಶ್ ಮೂಲತಃ ಚಿತ್ರದುರ್ಗದವರಾಗಿದ್ದು, ಓದಿದ್ದು ಬೆಳೆದಿದ್ದು ಶಿವಮೊಗ್ಗ ಮತ್ತು ಬೆಂಗಳೂರಿನಲ್ಲಿ. ಅವರಿಗೆ ಸಿನಿಮಾ, ಕನ್ನಡ ಸಾಹಿತ್ಯ ಮತ್ತು ಫೋಟೋಗ್ರಫಿಯಲ್ಲಿ ಹೆಚ್ಚು ಒಲವು.

ಮಾನಸ ಸತ್ಯನಾರಾಯಣSocial Media Committee

ಮಾನಸ ಸತ್ಯನಾರಾಯಣ

ಸಾಮಾಜಿಕ ಮಾಧ್ಯಮ ಸಮಿತಿManasa Satyanarayana

ಮಾನಸ ಅವರ ತಾಯ್ನುಡಿ ಕನ್ನಡವಾಗಿದ್ದು, ಈಕೆಗೆ ಕೊಲೊರಾಡೋ ಕನ್ನಡ ಸಮುದಾಯದೊಂದಿಗೆ ಎಂಟು ವರ್ಷಗಳಿಂದ ನಂಟು.

ಕಾಳಿ ಪ್ರಸಾದ್Membership Committee

ಕಾಳಿ ಪ್ರಸಾದ್

ಸದಸ್ಯತ್ವ ಸಮಿತಿKali Prasad

ಕಾಳಿ ಮೂಲತಃ ತಿಪಟೂರಿನವರಾಗಿದ್ದು, ಕಳೆದ 12 ವರ್ಷಗಳಿಂದ ಕೊಲೊರಾಡೋದಲ್ಲಿ ಅವರ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ರಾಕಿ ಪರ್ವತದ ರಸ್ತೆಗಳಲ್ಲಿ ಮೋಟಾರ್ ಸೈಕಲ್ ಸವಾರಿ ಮಾಡುವುದು ಅವರ ಉತ್ಸಾಹ.

ವಸುಧಾ ಹರೀಶ್Volunteer Drive Committee

ವಸುಧಾ ಹರೀಶ್

ಸ್ವಯಂಸೇವಕ ಚಾಲನಾ ಸಮಿತಿVasudha Harish

ವಸುಧಾ ಮೂಲತಃ ಮಂಗಳೂರಿನವರು, ಮಂಗಳೂರು ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿದ್ದಾರೆ ಮತ್ತು ಅವರ ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ಇಪ್ಪತ್ತೈದು ವರ್ಷಗಳಿಂದ ಕೊಲೊರಾಡೋದಲ್ಲಿ ವಾಸಿಸುತ್ತಿದ್ದಾರೆ.

ಸುಮ ಧನರಾಜ್Volunteer Drive Committee

ಸುಮ ಧನರಾಜ್

ಸ್ವಯಂಸೇವಕ ಚಾಲನಾ ಸಮಿತಿSuma Dhanaraj

ಸುಮ ಧನರಾಜ್ ಬೆಳೆದದ್ದು ಮತ್ತು ವಿದ್ಯಾಭ್ಯಾಸ ಮಾಡಿದ್ದು ಸಹ್ಯಾದ್ರಿಯ ಮಡಿಲಾದ ಶಿವಮೊಗ್ಗ ಜಿಲ್ಲೆಯಲ್ಲಿ. ಕಳೆದ ಇಪ್ಪತ್ತೇಳು ವರುಷಗಳಿಂದ ಅವರು ತಮ್ಮ ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ಕೊಲೊರಾಡೋದ ವೆಸ್ಟ್‌ಮಿನ್ಸ್‌ಟರ್ ನಗರದಲ್ಲಿ ನೆಲೆಸಿದ್ದಾರೆ.

Our Journey

1975
1975

Colorado Kannada Koota (CKK) was established to unite the Kannada-speaking community in Colorado and preserve the rich heritage of Karnataka through cultural, social, and educational initiatives.

1990
1990

CKK witnessed steady growth in membership, bringing together more Kannada families and strengthening cultural ties through festivals and community gatherings.

1995
1995

Regular celebrations of Ugadi, Rajyotsava, and other traditional festivals became signature events, fostering a strong sense of identity among the Kannada diaspora.

2000
2000

CKK expanded its focus to include youth, children, and families by introducing cultural programs, competitions, and community participation initiatives.

2005
2005

During unprecedented times, CKK embraced the digital world by hosting virtual cultural events, Kannada Shaale classes, festive celebrations, and community gatherings online. This ensured members stayed connected, celebrated together, and continued preserving Kannada culture despite the distance.

2010
2010

CKK broadened its outreach through educational workshops, social initiatives, and collaborations, reinforcing its role as a vibrant community organization.

2015
2015

Celebrating over 40 years of service, CKK continued to preserve Kannada traditions while embracing innovation and welcoming new generations.

2020
2020

The launch of Kannada Shaale marked a significant milestone, promoting Kannada language learning and cultural values among the next generation.

2025
2025

CKK proudly celebrated its Golden Jubilee, commemorating five decades of cultural preservation, community service, and lasting friendships.

2026
2026

Building on a rich legacy, CKK continues to inspire future generations by promoting Kannada language, culture, and community while expanding its impact across Colorado.

Bringing Kannada Closer to Colorado

Connect with fellow Kannadigas, celebrate our rich heritage, and create lasting memories through cultural events, family gatherings, and community experiences across Colorado.

Become A Member
Bringing Kannada Closer to Colorado

Support Our Mission

Help Us Build a Stronger Kannada Community

Every donation makes a difference

Donate to PayPal