Preserving Kannada
Language & Culture
for the Next Generation

Rooted in Tradition

Programs & Shaale | Colorado Kannada Koota

Helping Children
Connect Through Language

Our Kannada Learning Program helps children develop the ability to speak, read, and understand Kannada with confidence.

We create a positive and engaging environment where learning feels natural and enjoyable. Through structured lessons and progressive approach, children build both language skills and a deeper connection to their roots. Students are guided through speaking, reading, and writing using a curriculum designed to support gradual skill development. Classes are interactive and tailored by age group to ensure effective learning.

Our teachers are passionate about making every child feel comfortable, supported, and excited to learn.

Our Mission

To inspire children to learn and embrace Kannada, preserving our language by empowering the next generation to learn, speak, and carry it forward.

Enroll Now

Structured Learning Paths

Carefully curated curriculum for every age group. Choose the level that fits your child best.

FOUNDATION LEVELS (Beginner Stage)

Focus: Listening, speaking, and introduction to script

  • Level 1: ಸ್ವರ ಬಲ್ಲ (Swara Balla – 1)
  • No prior Kannada required
  • Basic vocabulary (family, colors, numbers)
  • Introduction to simple sentences
  • Exposure to Kannada letters (vowels & basic script)
  • 📘 Book: Swara Balla – 1
  • Level 2: ಸ್ವರ ಬಲ್ಲ (Swara Balla – 2)
  • Expands vocabulary and sentence formation
  • Reinforces spoken Kannada
  • Continued script learning
  • 📘 Book: Swara Balla – 2
Know More

SCRIPT BUILDING & LANGUAGE DEVELOPMENT

Focus: Reading and writing basics

  • Level 3: ಅಕ್ಷರ ಬಲ್ಲ (Akshara Balla – 1)
  • Introduction to full Kannada alphabet
  • Reading simple words
  • Writing basic letters and combinations
  • 📘 Book: Akshara Balla – 1
  • Level 4: ಅಕ್ಷರ ಬಲ್ಲ (Akshara Balla – 2)
  • Improved reading fluency
  • Writing simple sentences
  • Introduction to grammar patterns
  • 📘 Book: Akshara Balla – 2
Know More

INTERMEDIATE LEVELS (Reading & Writing Fluency)

Focus: Reading, writing, and sentence building

  • Level 5: ಪದ ಬಲ್ಲ (Pada Balla – 1)
  • Reading short passages and poems
  • Writing structured sentences
  • Grammar concepts and vocabulary expansion
  • 📘 Book: Pada Balla – 1
  • Level 6: ಪದ ಬಲ್ಲ (Pada Balla – 2)
  • Writing paragraphs
  • Reading longer texts (1–2 pages)
  • Stronger grammar usage and comprehension
  • 📘 Book: Pada Balla – 2
Know More

ADVANCED LEVELS (Fluency & Culture)

Focus: Comprehension, culture, and confidence

  • Level 7: ಜಾಣ (Jaana – 1)
  • Reading poems and cultural content
  • Introduction to Karnataka geography, arts, and traditions
  • Comprehension and discussion
  • 📘 Book: Jaana – 1
  • Level 8: ಜಾಣ (Jaana – 2)
  • Advanced reading and writing
  • Cultural understanding and storytelling
  • Strong conversational and written fluency
  • 📘 Book: Jaana – 2
Know More

Why Families Love Our Shaale

A Strong Foundation in Kannada

Our program is designed to help children build confidence in speaking, reading, and writing Kannada through a structured, level-based approach.

Structured & Progressive Curriculum

With a clear 8-level progression, students advance step-by-step—developing skills at the right pace with consistent guidance and measurable growth.

Dedicated, Community-Led Teaching

Our classes are led by committed teachers who bring care, consistency, and a passion for teaching, creating a supportive environment for every child.

Age-Appropriate Grouping

Students are grouped by age and proficiency, ensuring that learning is engaging, relevant, and effective for every stage.

Colorado Kannada Shaale

ಕೊಲೊರಾಡೋ ಕನ್ನಡ ಶಾಲೆ

Kannada School

ಕನ್ನಡವೆಮ್ಮಯ ಪ್ರಾಣ
ಕನ್ನಡ ಭಾಷಾಭಿಮಾನ
ಕನ್ನಡ ತಾಯಿಗೆ ನಮನ!

ಕೊಲೊರಾಡೋ ಕನ್ನಡ ಕೂಟ ಕರ್ನಾಟಕದ ಭಾಷೆ, ಸಂಸ್ಕೃತಿ, ಕಲೆ ಮತ್ತು ಸಾಹಿತ್ಯವನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ಕನ್ನಡ ಭಾಷೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ, ಸಾಹಿತ್ಯ ಸಂಸ್ಕೃತಿಗಳನ್ನೊಳಗೊಂಡಿರುವ ವಿಶ್ವ ಪರಂಪರೆಯ ಭಾಷೆಯೆಂದು ಪರಿಗಣಿಸಲಾಗಿದೆ. ಉದ್ಯೋಗ ಅರಸಿ ಅಮೇರಿಕದಲ್ಲಿ ನೆಲೆಸಿರುವ ನಾವು ಕನ್ನಡಿಗರು, ಇಲ್ಲೇ ಹುಟ್ಟಿ ಬೆಳೆಯುತ್ತಿರುವ ನಮ್ಮ ಮಕ್ಕಳು ನಮ್ಮ ಮಾತೃಭಾಷೆಯಿಂದ ವಂಚಿತರಾಗಬಾರದೆಂಬ ಸದ್ಧುದೇಶದಿಂದ ‘ಕನ್ನಡ ಅಕಾಡೆಮಿ’ಯ ಸಹಯೋಗದೊಂದಿಗೆ 'ಕೊಲೊರಾಡೋ ಕನ್ನಡ ಶಾಲೆ'ಯನ್ನು ಮಾರ್ಚ್ 2021 ರಿಂದ ಆರಂಭಿಸಲಾಗಿದೆ.

ಕೊಲೊರಾಡೋ ಕನ್ನಡ ಶಾಲೆಯು ಹನ್ನೆರಡು ಸಿಬ್ಬಂದಿ ಸದಸ್ಯದಿಂದ ನಿರ್ವಹಿಸಲ್ಪಡುತ್ತದೆ ಹಾಗೂ ಇವರೆಲ್ಲರೂ ಗೌರವಾನ್ವಿತ ಸ್ವಯಂಪ್ರೇರಿತ ಶಿಕ್ಷಕರು / ವ್ಯವಸ್ತಾಪಕರು. ಶಿಕ್ಷಕರು ಮತ್ತು ಬೋಧನೆ ಸ್ವಯಂಪ್ರೇರಿತವಾಗಿದ್ದರೂ, ಕೊಲೊರಾಡೋ ಕನ್ನಡ ಕೂಟವು ತನ್ನ ಎಲ್ಲಾ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಪಠ್ಯ-ಪುಸ್ತಕಗಳನ್ನು ಪ್ರಾಯೋಜಿಸುತ್ತದೆ. ಈ ಶಿಕ್ಷಕರೆಲ್ಲರೂ ಕನ್ನಡ ಅಕಾಡೆಮಿಯಿಂದ ಆನ್‌ಲೈನ್ ತರಬೇತಿ ಪಡೆದು ‘ಗೂಗಲ್ ಕ್ಲಾಸ್‌ರೂಮ್’ ಉಪಯೋಗಿಸಿಕೊಂಡು ಐವತ್ತಕ್ಕೂ ಹೆಚ್ಚು ಮಕ್ಕಳಿಗೆ ಪ್ರತಿ ವಾರಕ್ಕೊಮ್ಮೆ ವಾಸ್ತವಿಕ ಹತ್ತು ತರಗತಿಗಳ ಸಹಾಯದಿಂದ ಬೋಧನೆಯನ್ನು ನಡೆಸುತ್ತಾರೆ.

ಕನ್ನಡ ಅಕಾಡೆಮಿಯು ‘ಕನ್ನಡ ಅಭಿವೃದ್ಧಿ ಪ್ರಾಧಿಕಾರ’ದ ಅನುಮೋದನೆ ಪಡೆದು ಎಂಟು ವಿವಿಧ ಹಂತಗಳನ್ನು ಒಳಗೊಂಡ ಪಠ್ಯಕ್ರಮವನ್ನು ಸಿದ್ದಪಡಿಸಿದೆ – ‘ಸ್ವರ ಬಲ್ಲ - 1 & 2’, ‘ಅಕ್ಷರ ಬಲ್ಲ - 3 & 4’, ‘ಪದ ಬಲ್ಲ - 5 & 6’ ಮತ್ತು ‘ಜಾಣ - 7 & 8’. ಈ ಪಠ್ಯಕ್ರಮ 5 ರಿಂದ 17 ವರ್ಷ ವಯಸ್ಸಿನ ಮಕ್ಕಳಿಗೆ ಸೂಕ್ತವಾಗಿದ್ದು, ವಾರಕ್ಕೊಮ್ಮೆ ಆನ್‌ಲೈನ್‌ನಲ್ಲಿ ಕಲಿಸಲಾಗುತ್ತದೆ. ಮಕ್ಕಳಿಗೆ ಕಲಿಸುವ ಪ್ರಾಥಮಿಕ ಉದ್ದೇಶದಿಂದ ಈ ಪಠ್ಯಕ್ರಮವನ್ನು ಹೊರತರಲಾಗಿದ್ದರೂ, ವಯಸ್ಕರು ‘ಮೈಸೂರು ವಿಶ್ವವಿದ್ಯಾನಿಲಯ’ದ ಪ್ರಮಾಣೀಕರಣ ಪಠ್ಯಕ್ರಮಗಳ ಮೂಲಕ ಕನ್ನಡ ಅಕಾಡೆಮಿಯ ಮೂಲಕ ನೇರವಾಗಿ ದಾಖಲಾಗಬಹುದು ಮತ್ತು ಕಲಿಯಬಹುದು.

ಎಲ್ಲಾ ಮಕ್ಕಳು ಹಂತ 1 ರಿಂದ ಪ್ರಾರಂಭಿಸುತ್ತಾರೆ. ಕೊಲೊರಾಡೋ ಕನ್ನಡ ಶಾಲೆ ಪಠ್ಯ ಪುಸ್ತಕದ ಎಲೆಕ್ಟ್ರಾನಿಕ್ ಆವೃತ್ತಿಗಳನ್ನು ‘ಪಿಡಿಎಫ್’ ರೂಪದಲ್ಲಿ ಒದಗಿಸುತ್ತದೆ ಮತ್ತು ಆಸಕ್ತಿ ಇದ್ದಲ್ಲಿ, ಪೋಷಕರು ಬಣ್ಣದ ಪಠ್ಯ-ಪುಸ್ತಕಗಳನ್ನು ಪ್ರತ್ಯೇಕವಾಗಿ ಪಡೆಯಬಹುದು. ಕೊಲೊರಾಡೋ ಸ್ವಯಂಸೇವಕ ಪೋಷಕರು ಈ ಪಠ್ಯಕ್ರಮವನ್ನು ಕೊಲೊರಾಡೋ ಮಕ್ಕಳಿಗೆ ಕಲಿಸುತ್ತಾರೆ.

ಕೊಲೊರಾಡೋ ಕನ್ನಡ ಶಾಲೆ ಬೋಧನಾ ವಿಧಾನವು ಈ ಪರಿಕಲ್ಪನೆಗಳನ್ನು ಸರಳ ರೂಪದಲ್ಲಿ ಮಕ್ಕಳಿಗೆ ಹಂತ ಹಂತವಾಗಿ ಪರಿಚಯಿಸುತ್ತದೆ. ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಚಲಿಸುವ ವಿದ್ಯಾರ್ಥಿಗಳು ಅಂತಿಮವಾಗಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ನಂತರ, ಕೊಲೊರಾಡೋ ಕನ್ನಡ ಕೂಟದ ಚಟುವಟಿಕೆಗಳಲ್ಲಿ ಭಾಗವಹಿಸಿ ಪ್ರಮಾಣ ಪತ್ರವನ್ನು ಪಡೆಯುತ್ತಾರೆ ಮತ್ತು ಗುರುತಿಸಲ್ಪಡುತ್ತಾರೆ.

ಕನ್ನಡ‌ ಅಕಾಡೆಮಿಯ ಈ ಕಾರ್ಯ ನಿಜಕ್ಕೂ ಶ್ಲಾಘನೀಯ ಮತ್ತು ಅನುಕರಣೀಯ, ಈ ತಂಡದವರಿಗೆ ಕೊಲೊರಾಡೋ ಕನ್ನಡ ಶಾಲೆ ಸಿಬ್ಬಂದಿಯ ನಮನಗಳು.

ಕೊಲೊರಾಡೋ ಮನೆ-ಮನೆಗಳಲ್ಲಿ, ಮನ-ಮನಗಳಲ್ಲಿ ಕನ್ನಡದ ದೀಪ ಹಚ್ಚೋಣ ಬನ್ನಿ, ಕೊಲೊರಾಡೋ ಕನ್ನಡ ಶಾಲೆಯೊಂದಿಗೆ ಕೈ ಜೋಡಿಸಿ!

ಹೆಚ್ಚಿನ ಮಾಹಿತಿಗಾಗಿ, ಇಲ್ಲಿಗೆ ಭೇಟಿ ನೀಡಿ –
https://coloradokannadashaale.kannadaacademy.com

Our Principal

Shashikiran Kunigal

ಶಶಿಕಿರಣ್ ಕುಣಿಗಲ್

ಪ್ರಾಂಶುಪಾಲರು

Shashikiran Kunigal - Principal

ಶಶಿಕಿರಣ್ ಅವರು ಡೆನ್ವರ್ ಪ್ರದೇಶದಲ್ಲಿ ಇಪ್ಪತ್ತೇಳು ವರ್ಷಗಳಿಂದ ವಾಸಿಸುತ್ತಿದ್ದಾರೆ. ಅವರು ‘ದೂರಸಂಪರ್ಕ ನಿರ್ವಹಣೆ’ಯಲ್ಲಿ ಸ್ನಾತಕೋತ್ತರ ಪದವಿ ಮತ್ತು ‘ಕಂಪ್ಯೂಟರ್ ಸೈನ್ಸ್ ಮತ್ತು ತಂತ್ರಜ್ಞಾನ’ದಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದಿದ್ದಾರೆ. ಅವರು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮೂವತ್ತು ವರ್ಷಗಳಿಂದ ವಿವಿಧ ತಾಂತ್ರಿಕ ಮತ್ತು ನಾಯಕತ್ವದ ಪಾತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಹವ್ಯಾಸಕ್ಕಾಗಿ ತಮ್ಮ ಕುಟುಂಬದೊಂದಿಗೆ ವಿಶ್ವ ಪರ್ಯಟನೆ ಹಾಗೂ ಪರಿಶೋಧನೆ ಮಾಡಲು ಇಷ್ಟಪಡುತ್ತಾರೆ. ಅವರು ಈಗಾಗಲೇ ಭಾರತ, ನೇಪಾಳ, ಟಿಬೆಟ್, ನ್ಯೂಜ಼ೀಲ್ಯಾಂಡ್, ಅಮೇರಿಕ, ಸ್ವಿಟ್ಸರ್ಲ್ಯಾಂಡ್ ಹಾಗೂ ಆಫ್ರಿಕಾ ಸೇರಿದಂತೆ ವಿಶ್ವದ ನಾನಾ ಭಾಗಗಳಲ್ಲಿ ಪರ್ವತಾರೋಹಣ ಮಾಡಿದ್ದಾರೆ. ಶಶಿಕಿರಣ್ ಅವರು ಕೊಲೊರಾಡೋ ಕನ್ನಡ ಕೂಟದ ಪ್ರಸ್ತುತ ಅಧ್ಯಕ್ಷರಾಗಿದ್ದು, ಅನೇಕ ಸಾಂಸ್ಕೃತಿಕ ಮತ್ತು ದತ್ತಿ ಕಾರ್ಯಕ್ರಮಗಳನ್ನು ಆಯೋಜಿಸಿ, ಸಮಾನ ಮನಸ್ಕ ಉತ್ಸಾಹಿ ಕನ್ನಡ ಸ್ನೇಹಿತರೊಂದಿಗೆ ಸೇರಿ ಜನಪ್ರಿಯ ಕರುನಾಡ ಗಣ್ಯರನ್ನು ಹಾಗೂ ಕಲಾವಿದರನ್ನು ಕೊಲೊರಾಡೋಗೆ ಕನ್ನಡ ಕಾರ್ಯಕ್ರಮಗಳಿಗೆ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕೊಲೊರಾಡೋ ಕನ್ನಡ ಶಾಲೆಯ 'ಕನ್ನಡ ಕಲಿ' ಉಪಕ್ರಮ ಇವರ ಧೀರ್ಘ ಕಾಲದ ಕನಸು, ಇದನ್ನು ನನಸು ಮಾಡಿದ್ದಕ್ಕಾಗಿ ಇವರು ‘ಕನ್ನಡ ಅಕಾಡೆಮಿ’ ಮತ್ತು ‘ಕೊಲೊರಾಡೋ ಕನ್ನಡ ಶಾಲೆ’ಯ ಎಲ್ಲಾ ಸ್ವಯಂಸೇವಕ ಶಿಕ್ಷಕರಿಗೆ ಚಿರಋಣಿಯಾಗಿದ್ದಾರೆ. ಅವರ ಧ್ಯೇಯ

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಕೊಲೊರಾಡೋ ಕಂದಮ್ಮಗಳ ಬಾಳ್ಗೆ

Shaale Team

Meet Our Shaale Members

Dedicated volunteers teaching Kannada to the next generation in Colorado

Sushma Nagaraj
Administrator

ಸುಷ್ಮಾ ನಾಗರಾಜ್

ನಿರ್ವಾಹಕರು

Sushma Nagaraj

ಸುಷ್ಮಾ ಅವರು ಅಮೇರಿಕಾದ ಈಶಾನ್ಯ ರಾಜ್ಯಗಳಲ್ಲಿ ಕೆಲವು ವರ್ಷಗಳು ವಾಸವಿದ್ದು, ಪ್ರಸ್ತುತ ಕೊಲೊರಾಡೋ ರಾಜ್ಯದಲ್ಲಿ ಕಳೆದ ಐದು ವರ್ಷಗಳಿಂದ ವಾಸವಾಗಿದ್ದಾರೆ. ಅವರು 'ಕಂಪ್ಯೂಟರ್ ಸೈನ್ಸ್' ಇಂಜಿನಿಯರಿಂಗ್ ಪದವೀಧರರಾಗಿದ್ದು, ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಕೆಲಸ ಮಾಡುತಿದ್ದಾರೆ.

ಅಮೇರಿಕಾದಲ್ಲಿ ಹುಟ್ಟಿ ಬೆಳೆದ ಹಾಗೂ ನೆಲೆಸಿರುವ ಕನ್ನಡ ಮೂಲದ ಮಕ್ಕಳು ಕನ್ನಡ ಭಾಷೆಯನ್ನು ಕಲಿತು ನಮ್ಮ ಭಾರತೀಯ ಸಂಸ್ಕೃತಿ, ಭಾಷೆ, ಬೇರುಗಳ ಬಗ್ಗೆ ಹೆಮ್ಮೆ ಮೂಡುವಂತಾಗಲಿ

Shruthi Balakrishnan
Teacher

ಶ್ರುತಿ ಬಾಲಕೃಷ್ಣನ್

ಅಧ್ಯಾಪಕರು

Shruthi Balakrishnan

ಶೃತಿ ಅವರು ತಮ್ಮ ಕುಟುಂಬದೊಂದಿಗೆ ಏಳು ವರ್ಷಗಳಿಂದ ಕೊಲೊರಾಡೋದಲ್ಲಿ ವಾಸಿಸುತ್ತಿದ್ದಾರೆ. ಅವರು 'ಮಾಹಿತಿ ವಿಜ್ಞಾನ'ದಲ್ಲಿ ಇಂಜಿನಿಯರಿಂಗ್ ಪದವಿಯನ್ನು ಗಳಿಸಿದ್ದಾರೆ. ಅವರು ಪ್ರಸ್ತುತ ಕೊಲೊರಾಡೋ ರಾಜ್ಯದೊಂದಿಗೆ ಹಿರಿಯ ವ್ಯಾಪಾರ ವಿಶ್ಲೇಷಕರಾಗಿ ಕೆಲಸ ಮಾಡುತ್ತಿದ್ದಾರೆ.

ಕನ್ನಡ ಅಕಾಡೆಮಿಯ ಈ ಉಪಕ್ರಮವು ಕೊಲೊರಾಡೋದಲ್ಲಿ ಬೆಳೆಯುತ್ತಿರುವ ಮುಂದಿನ ಪೀಳಿಗೆಯ ಮಕ್ಕಳಿಗೆ ಕನ್ನಡವನ್ನು ಕಲಿಯಲು ಮತ್ತು ಕರ್ನಾಟಕದ ಸಂಸ್ಕೃತಿಯೊಂದಿಗೆ ಸಂಪರ್ಕ ಸಾಧಿಸಲು ಅವಕಾಶವನ್ನು ಒದಗಿಸುತ್ತದೆ

Usha Aradhya
Teacher

ಉಷಾ ಆರಾಧ್ಯ

ಅಧ್ಯಾಪಕರು

Usha Aradhya

ಉಷಾ ಅವರು ಮೂಲತಃ ನಮ್ಮ ಬೆಂಗಳೂರು ನಗರದವರಾಗಿದ್ದು, ತಮ್ಮ ಪತಿ ಹಾಗೂ ಇಬ್ಬರು ಮಕ್ಕಳೊಂದಿಗೆ ಹೈಲ್ಯಾಂಡ್ಸ್ ರಾಂಚ್, ಕೊಲೊರಾಡೋದಲ್ಲಿ ವಾಸಿಸುತ್ತಿದ್ದಾರೆ. ಉಷಾ ಪ್ರವಾಸ ಮಾಡುವುದು ಮತ್ತು ವಾರಾಂತ್ಯದಲ್ಲಿ ಹೊಸ ರೆಸ್ಟೋರೆಂಟ್‌ಗಳನ್ನು ಅನ್ವೇಷಿಸುವುದನ್ನು ಇಷ್ಟ ಪಡುತ್ತಾರೆ.

Jayasudha Medu
Teacher

ಜಯಸುಧಾ ಮೆದು

ಅಧ್ಯಾಪಕರು

Jayasudha Medu

ಜಯಸುಧಾ ಮೂಲತಃ ನಮ್ಮ ಬೆಂಗಳೂರು ನಗರದವರಾಗಿದ್ದು ಪ್ರಸ್ತುತ ಕೊಲರಾಡೋ ಸ್ಪ್ರಿಂಗ್ಸ್ನಲ್ಲಿ ವಾಸಿಸುತ್ತಿದ್ದಾರೆ. ಈಕೆ ವೃತ್ತಿಯಿಂದ ಇಂಜಿನಿಯರ್ ಆಗಿದ್ದು ಕನ್ನಡ ಭಾಷೆಯ ಮೇಲಿನ ಅಪಾರ ಪ್ರೀತಿ ಹೊಂದಿರುವ ಸಮರ್ಪಿತ ಕನ್ನಡ ಶಿಕ್ಷಕಿಯಾಗಲು ಇಚ್ಛಿಸುತ್ತಾರೆ.

Suma Shekhar
Teacher

ಸುಮ ಶೇಖರ್

ಅಧ್ಯಾಪಕರು

Suma Shekhar

ಸುಮ ಶೇಖರ್ ಪೂರ್ಣಕಾಲಿಕ ಉದ್ಯೋಗಸ್ಥೆ ಮತ್ತು ಇಬ್ಬರು ಚುಟುಕು ಮಕ್ಕಳ ತಾಯಿ. ಅವರಿಗೆ ಅನ್ವೇಷಣೆ, ಸ್ವಯಂಸೇವೆ ಮತ್ತು ಸೃಜನಾತ್ಮಕತೆ ಎಂದರೆ ಬಹಳ ಪ್ರೀತಿ! ಸುಮ ಕೊಲೊರಾಡೋದಲ್ಲೂ ಹಾಗೂ ನಮ್ಮ ಬೆಂಗಳೂರಿನಲ್ಲೂ ಸಮಾನ ಸಮಯ ಕಳೆದಿದ್ದಾರೆ.

Sreedevi Kalage
Teacher

ಶ್ರೀದೇವಿ ಕಾಳಗೆ

ಅಧ್ಯಾಪಕರು

Sreedevi Kalage

ಶ್ರೀದೇವಿ ಅವರು ಡೆನ್ವರ್ ಪ್ರದೇಶದಲ್ಲಿ ಐದು ವಷ೯ಗಳಿ೦ದ ವಾಸಿಸುತ್ತಿದ್ದಾರೆ. ಅವರು 'ಇಲೆಕ್ರಾನಿಕ್ಸ್ ಮತ್ತು ಕಮ್ಯುನಿಕೇಶನ್' ವಿಭಾಗದಲ್ಲಿ ಎ೦ಜಿನಿಯರಿ೦ಗ್ ಪದವಿ ಪಡೆದಿದ್ದಾರೆ. ಕನ್ನಡ ಮಾಧ್ಯಮದ ಸರಕಾರಿ ಶಾಲೆಯಲ್ಲಿ ಓದಿರುವುದು ಅವರಿಗೆ ಕನ್ನಡ ಕಲಿಸಲು ಸ್ಪೂತಿ೯ ನೀಡಿದೆ.

Chandrakala Achar
Teacher

ಚಂದ್ರಕಲಾ ಆಚಾರ್

ಅಧ್ಯಾಪಕರು

Chandrakala Achar

ಚಂದ್ರಕಲ ಮೂಲತಃ ಬೆಂಗಳೂರಿನವರು. ಬೆಂಗಳೂರಿನ 'ಬಿಐಟಿ' ಕಾಲೇಜಿನಲ್ಲಿ 'ಕಂಪ್ಯೂಟರ್ ಸೈನ್ಸ್' ಇಂಜಿನಿಯರಿಂಗ್ ವ್ಯಾಸಂಗ ಮಾಡಿ, ಕಳೆದ ಹನ್ನೊಂದು ವರ್ಷಗಳಿಂದ ಅಮೇರಿಕಾದಲ್ಲಿ ನೆಲೆಸಿದ್ದಾರೆ. ಇವರ ಹವ್ಯಾಸಗಳು ಒಳಾಂಗಣ ಬೈಕಿಂಗ್, ಒಳಾಂಗಣ ವಿನ್ಯಾಸ ಹಾಗೂ ಮರಗೆಲಸ!

Manjari Ramesh
Teacher

ಮಂಜರಿ ರಮೇಶ್

ಅಧ್ಯಾಪಕರು

Manjari Ramesh

ಮಂಜರಿ ಆರು ವರ್ಷಗಳಿಂದ ತಮ್ಮ ಕುಟುಂಬ ಸಮೇತ ಡೆನ್ವರ್ ಅಲ್ಲಿ ವಾಸಿಸುತ್ತಿದ್ದಾರೆ. ಇವರು 'ಹಣಕಾಸು ಮತ್ತು ಮಾನವ ಸಂಪನ್ಮೂಲ' ವಿಶೇಷತೆಯಿಂದ 'ಬಿಸಿನೆಸ್ ಅಡ್ಮಿನಿಸ್ಟ್ರೇಷನ್' ಸ್ನಾತಕೋತ್ತರ (ಎಂಬಿಎ) ಪದವಿಯನ್ನು ಪಡೆದಿದ್ದಾರೆ.

ನಾವುಗಳು ನಮ್ಮ ಸಮಾಜಕ್ಕೆ ನಮ್ಮಿಂದ ಸಾಧ್ಯವಾದಷ್ಟು ಕೊಡುಗೆ ನೀಡಬೇಕು. ಅದು ನಮ್ಮ ನೈತಿಕ ಕರ್ತವ್ಯ.

Ganesha Kiran
Teacher

ಗಣೇಶ ಕಿರಣ್

ಅಧ್ಯಾಪಕರು

Ganesha Kiran

ಗಣೇಶ್ ಕಿರಣ್ ಉತ್ತರ ಡೆನ್ವರ್ ನಿವಾಸಿಯಾಗಿ ಏಳು ವರ್ಷ ಕಳೆದಿದ್ದಾರೆ. ಅವರು 'ಮಾಹಿತಿ ತಂತ್ರಜ್ಞಾನ' ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು, ವೈದ್ಯಕೀಯ ಉಪಕರಣಗಳ ತಂತ್ರಾಂಶದ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಗಣೇಶ್ ಮೂಲತಃ ಮೈಸೂರಿನವರು.

Manjula Palaniyappan
Teacher

ಮಂಜುಳಾ ಪಳನಿಯಪ್ಪನ್

ಅಧ್ಯಾಪಕರು

Manjula Palaniyappan

ಮಂಜುಳಾ ಪಳನಿಯಪ್ಪನ್ ಬೆಂಗಳೂರಿನಲ್ಲಿ ಜನಿಸಿ, 'ಮಾಹಿತಿ ಶಾಸ್ತ್ರ'ದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿ, 2013ರಲ್ಲಿ ಅಮೇರಿಕಾಗೆ ಸ್ಥಳಾಂತರವಾದರು. ಕನ್ನಡನಾಡಿನ ಮೇಲಿರುವ ಪ್ರೀತಿ ಮತ್ತು ಬೋಧನೆಗಾಗಿ ಅವರ ಆಸಕ್ತಿ.

Swathi Karanth
Teacher

ಸ್ವಾತಿ ಕಾರಂತ್

ಅಧ್ಯಾಪಕರು

Swathi Karanth

ಸ್ವಾತಿ ಮೂಲತಃ ಕರ್ನಾಟಕ ರಾಜ್ಯದ ಮಲೆನಾಡು ಜಿಲ್ಲೆಯ ಶಿವಮೊಗ್ಗದವರು. ಇವರು 'ಕಂಪ್ಯೂಟರ್ ಸೈನ್ಸ್ನ' ಇಂಜಿನಿಯರಿಂಗ್ ಅಲ್ಲಿ ಪದವಿ ಪಡೆದು, ಡೆನ್ವರ್ ಪ್ರದೇಶದಲ್ಲಿ ಸುಮಾರು ಎರಡು ವರ್ಷಗಳಿಂದ ವಾಸಿಸುತ್ತಿದ್ದಾರೆ.

Join Our Kannada Learning Journey Today!

Limited seats available for the upcoming fall semester. Enroll your child to start their cultural education journey.

Enroll Now