About Us

About Us

Colorado Kannada Koota (CKK) is a vibrant community organization dedicated to preserving and promoting Kannada language, culture, and traditions in Colorado.

Colorado Kannada Koota Community

Who We Are

Colorado Kannada Koota (CKK), established in 1975, is a non-profit organization dedicated to the needs of the Kannada speaking community in Colorado.

During the past 50+ years, Colorado Kannada Koota has become a trusted name in the community, organizing cultural events, festivals, and educational programs that bring together families and individuals who share a passion for Kannada language and heritage.

We provide a platform for Kannadigas to connect, celebrate our rich cultural traditions, and pass on our heritage to the next generation. From annual festivals like Mile-Hi Sangamam to our Kannada Shaale language school, CKK offers numerous opportunities for community engagement.

Purpose

To promote the Kannada language, culture, and heritage in Colorado while creating a strong community for families to connect and celebrate their roots.

Our purpose is built around four key pillars: celebrating rich Kannada cultural traditions, supporting language education through our Kannada Shaale, connecting community members through events and programs, and preserving our heritage for future generations.

Through our various programs and initiatives, we strive to create meaningful experiences that strengthen the bond between Kannadigas living in Colorado.

CKK Purpose
CKK Vision

Vision

To be a thriving hub for Kannada Culture, Heritage and Social Unity in Colorado by building a strong community where our cultural identity flourishes.

We envision a community where every Kannadiga feels at home, where children grow up proud of their heritage, and where our traditions continue to inspire generations to come.

Our goal is to be a model organization that showcases the vibrancy of Karnataka and its people to the broader Colorado community.

Our Team

Executive Team

Shashikiran Kunigal

ಶಶಿಕಿರಣ್ ಕುಣಿಗಲ್

ಅಧ್ಯಕ್ಷರು

Shashikiran Kunigal - President

ಶಶಿಕಿರಣ್ ಅವರು ಬೆಂಗಳೂರಿನಲ್ಲಿ ಜನಿಸಿ, ಮೈಸೂರಿನಲ್ಲಿ ಬೆಳೆದು, ಡೆನ್ವರ್ ಪ್ರದೇಶದಲ್ಲಿ ಇಪ್ಪತ್ತೇಳು ವರ್ಷಗಳಿಂದ ತಮ್ಮ ಪತ್ನಿ ಹಾಗೂ ಮೂವರು ಸುಪುತ್ರಿಯರೊಂದಿಗೆ ವಾಸಿಸುತ್ತಿದ್ದಾರೆ. ಅವರು ‘ದೂರಸಂಪರ್ಕ ನಿರ್ವಹಣೆ’ಯಲ್ಲಿ ಸ್ನಾತಕೋತ್ತರ ಪದವಿ ಮತ್ತು ‘ಕಂಪ್ಯೂಟರ್ ಸೈನ್ಸ್ ಮತ್ತು ತಂತ್ರಜ್ಞಾನ’ದಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದಿದ್ದಾರೆ. ಅವರು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮೂವತ್ತು ವರ್ಷಗಳಿಂದ ವಿವಿಧ ತಾಂತ್ರಿಕ ಮತ್ತು ನಾಯಕತ್ವದ ಪಾತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಹವ್ಯಾಸಕ್ಕಾಗಿ ತಮ್ಮ ಕುಟುಂಬದೊಂದಿಗೆ ವಿಶ್ವ ಪರ್ಯಟನೆ ಹಾಗೂ ಪರಿಶೋಧನೆಗಾಗಿ ಈಗಾಗಲೇ ಭಾರತ, ನೇಪಾಳ, ಟಿಬೆಟ್, ನ್ಯೂಜ಼ೀಲ್ಯಾಂಡ್, ಅಮೇರಿಕ, ಸ್ವಿಟ್ಸರ್ಲ್ಯಾಂಡ್ ಹಾಗೂ ಆಫ್ರಿಕಾ ಸೇರಿದಂತೆ ವಿಶ್ವದ ನಾನಾ ಭಾಗಗಳಲ್ಲಿ ಪರ್ವತಾರೋಹಣ ಮಾಡಿದ್ದಾರೆ. ಶಶಿಕಿರಣ್ ಅನೇಕ ಸಾಂಸ್ಕೃತಿಕ ಮತ್ತು ದತ್ತಿ ಕಾರ್ಯಕ್ರಮಗಳನ್ನು ಆಯೋಜಿಸಿ, ಸಮಾನ ಮನಸ್ಕ ಉತ್ಸಾಹಿ ಕನ್ನಡ ಸ್ನೇಹಿತರೊಂದಿಗೆ ಸೇರಿ ಜನಪ್ರಿಯ ಕರುನಾಡ ಗಣ್ಯರನ್ನು ಹಾಗೂ ಕಲಾವಿದರನ್ನು ಕೊಲೊರಾಡೋಗೆ ಕನ್ನಡ ಕಾರ್ಯಕ್ರಮಗಳಿಗೆ ಕರೆತರುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. “ಕೊಲೊರಾಡೋ ಕನ್ನಡ ಕೂಟದ ಅಧ್ಯಕ್ಷನಾಗಿ ಕನ್ನಡ ಬಳಗದ ಸೇವೆ ಸಲ್ಲಿಸುವ ಅವಕಾಶ ಒದಗಿರುವುದು ನನಗೆ ಅತ್ಯಂತ ಗೌರವದ ವಿಚಾರ. ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು ತದನಂತರ ಅಮೇರಿಕಾದಲ್ಲಿ ಸೇರಿದ ನಮ್ಮ ಮಂತ್ರ ಒಂದೇ - ನಾವು ಕನ್ನಡಿಗರು, ಕನ್ನಡ ಭಾಷೆ ಮತ್ತು ಸಂಸ್ಕೃತಿ ನಮ್ಮ ಉಸಿರು. ನನ್ನ ಅಧ್ಯಕ್ಷತೆಯಲ್ಲಿ ಕನ್ನಡ ಸೇವೆಗಯ್ಯಲು ಕೊಲೊರಾಡೋದ ಬೇರೆ ಬೇರೆ ನಗರಗಳಿಂದ ಕಂಕಣಬದ್ಧ ಕನ್ನಡಿಗರನ್ನು ಆಯ್ದು ಹೊಸ ಕಾರ್ಯಕಾರಿ ಸಮಿತಿಯನ್ನು ಒಟ್ಟುಗೂಡಿಸಿದ್ದೇನೆ. ಇವರೆಲ್ಲರ ಸ್ಪೂರ್ತಿ ಮತ್ತು ಉತ್ತೇಜನದಿಂದ ನಮ್ಮ ಕೆಲಸವು ಕನ್ನಡಿಗರಲ್ಲಿ ಅಭಿಮಾನ ಮತ್ತು ಒಗ್ಗಟ್ಟು ಬೆಳೆಸುತ್ತದೆ. ನಾವೆಲ್ಲರೂ ಕೈಗೂಡಿಸಿ ಕನ್ನಡಾಂಬೆಯ ಸೇವೆ ಮಾಡೋಣ, ಬನ್ನಿ ನಮ್ಮೊಂದಿಗೆ ಕೈ ಜೋಡಿಸಿ” - ಎನ್ನುತ್ತಾರೆ ಶಶಿಕಿರಣ್.

ಕೊಲೊರಾಡೋ ಕನ್ನಡ ಕೂಟದ ಅಧ್ಯಕ್ಷನಾಗಿ ಕನ್ನಡ ಬಳಗದ ಸೇವೆ ಸಲ್ಲಿಸುವ ಅವಕಾಶ ಒದಗಿರುವುದು ನನಗೆ ಅತ್ಯಂತ ಗೌರವದ ವಿಚಾರ. ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು ತದನಂತರ ಅಮೇರಿಕಾದಲ್ಲಿ ಸೇರಿದ ನಮ್ಮ ಮಂತ್ರ ಒಂದೇ - ನಾವು ಕನ್ನಡಿಗರು, ಕನ್ನಡ ಭಾಷೆ ಮತ್ತು ಸಂಸ್ಕೃತಿ ನಮ್ಮ ಉಸಿರು.

Vasudeva Rao

ವಾಸುದೇವ ರಾವ್

ಉಪಾಧ್ಯಕ್ಷರು

Vasudeva Rao - Vice President

ವಾಸು ಚಿತ್ರದುರ್ಗದಲ್ಲಿ ಜನಿಸಿ, ನಂತರ ಬೆಂಗಳೂರು ನಗರದಲ್ಲಿ ನೆಲೆಸಿ, ಪ್ರಸ್ತುತ ಡೆನ್ವರ್, ಕೊಲೊರಾಡೋದಲ್ಲಿ ಐಟಿ ಕ್ಷೇತ್ರದಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದಾರೆ. ವಾಸು ಹಲವಾರು ಸಂಘ - ಸಂಸ್ಥೆಗಳಲ್ಲಿ, ಕನ್ನಡ ಸಂಘಗಳಲ್ಲಿ ಕಾರ್ಯ ನಿರ್ವಹಿಸಿರುವ ಅನುಭವ ಹೊಂದಿದ್ದು, ಕೊಲೊರಾಡೋ ಕನ್ನಡ ಕೂಟದಲ್ಲಿ ಈ ಅನುಭವಗಳನ್ನು ಹಂಚಿಕೊಳ್ಳಲು ಹಾಗೂ ಕಾರ್ಯರೂಪಕ್ಕೆ ತರಲು ಬಯಸುತ್ತಾರೆ. “ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರೋತ್ಸಾಹಿಸುವುದು ನನ್ನ ಹೃದಯಕ್ಕೆ ಹತ್ತಿರವಾಗಿದೆ. ನನ್ನಲ್ಲಿ ನವೀನ ತಂತ್ರಜ್ಞಾನ ಮತ್ತು ಪರಂಪರೆಯ ಮಿಲನದ ಒಂದು ವಿಶಿಷ್ಟ ಸಂಯೋಜನೆ ಇದೆ. ಅದನ್ನು ಕನ್ನಡಕ್ಕಾಗಿ ಬಳಸುವ ಬಯಕೆ. ಕೊಲೊರಾಡೋ ಕನ್ನಡ ಕೂಟದ ಭಾಗವಾಗಿರುವುದು ನನಗೆ ಹೆಮ್ಮೆ ಮತ್ತು ಸಂತೋಷವನ್ನು ತಂದಿದೆ. ನಮ್ಮ ಸಮುದಾಯದೊಂದಿಗೆ ಕನ್ನಡವನ್ನು ಹರಡಲು ಹಾಗೂ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸಲು ಇದು ಒಳ್ಳೆಯ ವೇದಿಕೆಯಾಗಿದೆ. ಇದು ನನ್ನ ಕನ್ನಡ ಪ್ರೀತಿ ಮತ್ತು ಸಮಾಜ ಸೇವೆಯ ಧ್ಯೇಯವನ್ನು ಮುನ್ನಡೆಸುವ ಒಂದು ಸುಂದರ ಅವಕಾಶ” - ಎನ್ನುತ್ತಾರೆ ವಾಸು.

ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರೋತ್ಸಾಹಿಸುವುದು ನನ್ನ ಹೃದಯಕ್ಕೆ ಹತ್ತಿರವಾಗಿದೆ. ನನ್ನಲ್ಲಿ ನವೀನ ತಂತ್ರಜ್ಞಾನ ಮತ್ತು ಪರಂಪರೆಯ ಮಿಲನದ ಒಂದು ವಿಶಿಷ್ಟ ಸಂಯೋಜನೆ ಇದೆ. ಅದನ್ನು ಕನ್ನಡಕ್ಕಾಗಿ ಬಳಸುವ ಬಯಕೆ.

Meena Kikkeri

ಮೀನಾ ಕಿಕ್ಕೇರಿ

ಕಾರ್ಯದರ್ಶಿಗಳು

Meena Kikkeri - Secretary

ಮೀನಾ ಡೆನ್ವರ್, ಕೊಲೊರಾಡೋದಲ್ಲಿ ಮೂವತ್ತು ವರ್ಷಗಳಿಗಿಂತಲೂ ಹೆಚ್ಚು ಕಾಲ ನೆಲೆಸಿದ್ದು, ಕೇವಲ ಎಂಟು-ಹತ್ತು ಕುಟುಂಬಗಳಿಂದ ನೂರಾರು ಕುಟುಂಬಗಳ ಕ್ರಮೇಣ ಪ್ರಗತಿಯನ್ನು ಕಣ್ಣಾರೆ ಕಂಡಿದ್ದಾರೆ. ಮೀನಾ ಅವರು ಉದ್ಯಮಶೀಲ ಹಿನ್ನೆಲೆಯಿಂದ ಬಂದವರಾಗಿದ್ದು, ಸಂವಹನೆ, ಸಂಘಟನೆ, ಸಕ್ರಿಯಗೊಳಿಸುವಿಕೆ ಮತ್ತು ಮುಂದಿನ ಪೀಳಿಗೆಯನ್ನು ಪ್ರೋತ್ಸಾಹಿಸುವಂತಹ ಬಹು ಅಂಶಗಳಲ್ಲಿ ಸಂಪನ್ಮೂಲವಾಗಬೇಕೆಂಬ ಬಯಕೆಯೊಂದಿಗೆ ಕೊಲೊರಾಡೋ ಕನ್ನಡ ಕೂಟದೊಂದಿಗೆ ತಮ್ಮನ್ನು ತಾವು ತೊಡಗಿಸಿಗೊಂಡಿದ್ದಾರೆ. “ನಮ್ಮ ಮುಂದಿನ ಪೀಳಿಗೆಗಳಿಗೆ ಅಭಿಮಾನ ಹಾಗೂ ಅವಕಾಶಗಳನ್ನು ಒದಗಿಸುವ ಒಂದು ವೇದಿಕೆಯಲ್ಲಿ ಭಾಗವಹಿಸಲು ಸದಾ ಸಿದ್ದ ಮತ್ತು ಈ ಸದಾವಕಾಶ ಕೊಡಿಸುವ ಕೊಲೊರಾಡೋ ಕನ್ನಡ ಕೂಟಕ್ಕೆ ಸದಾ ಚಿರಋಣಿ” - ಎನ್ನುತ್ತಾರೆ ಮೀನಾ.

ನಮ್ಮ ಮುಂದಿನ ಪೀಳಿಗೆಗಳಿಗೆ ಅಭಿಮಾನ ಹಾಗೂ ಅವಕಾಶಗಳನ್ನು ಒದಗಿಸುವ ಒಂದು ವೇದಿಕೆಯಲ್ಲಿ ಭಾಗವಹಿಸಲು ಸದಾ ಸಿದ್ದ ಮತ್ತು ಈ ಸದಾವಕಾಶ ಕೊಡಿಸುವ ಕೊಲೊರಾಡೋ ಕನ್ನಡ ಕೂಟಕ್ಕೆ ಸದಾ ಚಿರಋಣಿ.

Our Community

Committee Members

Ramachandra Bykadi
Technology Committee

ರಾಮಚಂದ್ರ ಬೈಕಾಡಿ

ತಂತ್ರಜ್ಞಾನ ಸಮಿತಿ

Ramachandra Bykadi

ರಾಮಚಂದ್ರ ಅವರು ಮೂಲತಃ ಬೆಂಗಳೂರಿನವರಾಗಿದ್ದು, ಉಡುಪಿಯಲ್ಲಿ ಬೇರುಗಳನ್ನು ಹೊಂದಿದ್ದಾರೆ. ಅವರು ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಕೊಲೊರಾಡೋದ ಹೈಲ್ಯಾಂಡ್ಸ್ ರಾಂಚ್‌ನಲ್ಲಿ ವಾಸಿಸುತ್ತಾರೆ. ರಾಮ್ ಅವರು 'ಡೇಟಾ ಸೈನ್ಸ್ ಮತ್ತು ವ್ಯವಹಾರ'ದಲ್ಲಿ ಸ್ನಾತಕೋತ್ತರ ಪದವಿ ಹೊಂದಿದ್ದಾರೆ. ರಾಮ್ ಅವರು ಸ್ಯಾಂಡಲ್‌ವುಡ್ ಹಾಡುಗಳನ್ನು ಹಾಡಲು ಇಷ್ಟಪಡುತ್ತಾರೆ ಮತ್ತು ವಿಶೇಷವಾಗಿ ಡಾ. ರಾಜ್‌ಕುಮಾರ್ ಹಾಡುಗಳೆಂದರೆ ಪಂಚ-ಪ್ರಾಣ.

Harsha Kumar
Technology Committee

ಹರ್ಷ ಕುಮಾರ್

ತಂತ್ರಜ್ಞಾನ ಸಮಿತಿ

Harsha Kumar

ಹರ್ಷ ಹುಟ್ಟಿ ಬೆಳೆದದ್ದು ನಮ್ಮ ದೇವಸ್ಥಾನದ ಪಟ್ಟಣವಾದ ಉಡುಪಿಯಲ್ಲಿ. ಹರ್ಷ ತನ್ನ ಪತ್ನಿ ಮತ್ತು ಇಬ್ಬರು ಪುತ್ರಿಯರೊಂದಿಗೆ ಕೊಲೊರಾಡೋದ ಥಾರ್ನ್‌ಟನ್‌ನಲ್ಲಿ ವಾಸಿಸುತ್ತಿದ್ದಾರೆ. ಹರ್ಷ ಅವರು ನೃತ್ಯ ಮತ್ತು ನಾಟಕಗಳಲ್ಲಿ ಅಭಿನಯಿಸಲು ಇಷ್ಟಪಡುತ್ತಾರೆ ಮತ್ತು ಯಕ್ಷಗಾನದ ಬಗ್ಗೆ ಒಲವು ಹೊಂದಿದ್ದಾರೆ.

Akshata Udupa
Food Committee

ಅಕ್ಷತಾ ಉಡುಪ

ಆಹಾರ ಸಮಿತಿ

Akshata Udupa

ಅಕ್ಷತಾ ಮೂಲತಃ ಮಂಗಳೂರಿನವರಾಗಿದ್ದು, ಅಮೇರಿಕಾದಲ್ಲಿ ಕಳೆದ ಹದಿನೇಳು ವರ್ಷಗಳಿಂದ, ಹಾಗೂ ನಮ್ಮ ಕೊಲೊರಾಡೋದಲ್ಲಿ ಕಳೆದ ಹನ್ನೆರಡು ವರ್ಷಗಳಿಂದ ತಮ್ಮ ಪತಿ ಹಾಗೂ ಇಬ್ಬರು ಮಕ್ಕಳ ಜೊತೆ ವಾಸಿಸುತ್ತಿದ್ದಾರೆ. ಇವರು ಸಾಂಪ್ರದಾಯಿಕ ದಿನಚರಿಯನ್ನು ಮೈಗೂಡಿಸಿಗೊಂಡು ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಪ್ರಾಮಾಣಿಕ ಪ್ರಯತ್ನದಲ್ಲಿ ಸದಾ ನಿರತರಾಗಿರುತ್ತಾರೆ.

ಇಲ್ಲಿರುವ ಎಲ್ಲಾ ಕನ್ನಡಿಗರಿಗೂ ಜೊತೆ ಸೇರಲು, ಹಬ್ಬಗಳನ್ನು ಆಚರಿಸಲು, ನಮ್ಮ ಸಂಸ್ಕೃತಿಯನ್ನು ಬೆಳೆಸಲು, ಮಕ್ಕಳೆಲ್ಲರಿಗೂ ಕನ್ನಡದ ಬೇರಿನ ನಂಟು ಉಳಿಸಲು ಇರುವ ಏಕೈಕ ಮಾಧ್ಯಮ ನಮ್ಮ ಕೊಲೊರಾಡೋ ಕನ್ನಡ ಕೂಟ.

Manasi Shandilya
Food Committee

ಮಾನಸಿ ಶಾಂಡಿಲ್ಯ

ಆಹಾರ ಸಮಿತಿ

Manasi Shandilya

ಮಾನಸಿ ಅವರು ಭಾವೋದ್ರಿಕ್ತ ಮತ್ತು ಕನ್ನಡಿಗ ಸಮುದಾಯದ ಬಗ್ಗೆ ಆಳವಾದ ಕಾಳಜಿ ಹೊಂದಿರುವ ವ್ಯಕ್ತಿ. ಭಾರತೀಯ (ಕನ್ನಡತಿ) ಮೂಲದ ಮೊದಲ ತಲೆಮಾರಿನ ಅಮೇರಿಕನ್ ಪ್ರಜೆಯಾಗಿ, ಅವರು ಅಮೇರಿಕನ್ ಮತ್ತು ಭಾರತೀಯ ಮೌಲ್ಯಗಳ ಉತ್ತಮ ಮಿಶ್ರಣವನ್ನು ಹೊಂದಿದ್ದಾರೆ.

ಸಮಾನ ಮನಸ್ಕ ಉತ್ಸಾಹಿ ಕನ್ನಡಿಗರನ್ನು ಒಳಗೊಂಡಿರುವ ಕೊಲೊರಾಡೋ ಕನ್ನಡ ಕೂಟ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉತ್ತೇಜಿಸಲು ಒಂದು ಪ್ರಮುಖ ಮಳಿಗೆಯಾಗಿದೆ.

Shamala Thimmaraju
Cultural Committee

ಶಾಮಲ ತಿಮ್ಮರಾಜು

ಸಾಂಸ್ಕೃತಿಕ ಸಮಿತಿ

Shamala Thimmaraju

ಶ್ಯಾಮಲಾ ಅವರು 'ನಮ್ಮ ಬೆಂಗಳೂರು' ಸ್ಥಳೀಯರು ಮತ್ತು ಕನ್ನಡ ಭಾಷೆಯನ್ನು ತುಂಬಾ ಇಷ್ಟಪಡುವ ವ್ಯಕ್ತಿ. ಈ ಉತ್ಸಾಹಭರಿತ ನಗರದಲ್ಲಿ ಬೆಳೆದ ಅವರು ನಮ್ಮ ಶ್ರೀಮಂತ ಕನ್ನಡ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಪರಂಪರೆಯೊಂದಿಗೆ ಆಳವಾದ ಸಂಪರ್ಕ ಹೊಂದಿದ್ದಾರೆ.

Babu Herunde
Cultural Committee

ಬಾಬು ಹೇರುಂಡೆ

ಸಾಂಸ್ಕೃತಿಕ ಸಮಿತಿ

Babu Herunde

ಬಾಬು ಕಳೆದ ಇಪ್ಪತ್ತು ವರ್ಷಗಳಿಂದ ಕೊಲೊರಾಡೋ ಸ್ಪ್ರಿಂಗ್ಸ್‌ನಲ್ಲಿ ವಾಸಿಸುತ್ತಿದ್ದು, ಬಹಳ ವರ್ಷಗಳಿಂದ ಕೊಲೊರಾಡೋ ಕನ್ನಡ ಕೂಟ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಈ ಹಿಂದೆ ಕೊಲೊರಾಡೋ ಕನ್ನಡ ಶಾಲೆಯ ಅಧ್ಯಾಪಕರಾಗಿ ಮಕ್ಕಳಿಗೆ ಕನ್ನಡ ಪಾಠ ಕಲಿಸಿದ್ದಾರೆ.

ಕೊಲೊರಾಡೋನಲ್ಲಿರುವ ಕನ್ನಡ ಸಮುದಾಯಕ್ಕೆ ಕನ್ನಡ ಸಂಸ್ಕೃತಿ ಮತ್ತು ಭಾಷೆಯನ್ನು ಶ್ರೀಮಂತಗೊಳಿಸಲು ಮತ್ತು ಕಲಿಯಲು ಕೊಲೊರಾಡೋ ಕನ್ನಡ ಕೂಟ ಉತ್ತಮ ವೇದಿಕೆಯನ್ನು ಒದಗಿಸುತ್ತದೆ.

Akshata Krishnamurthy
Cultural Committee

ಅಕ್ಷತಾ ಕೃಷ್ಣಮೂರ್ತಿ

ಸಾಂಸ್ಕೃತಿಕ ಸಮಿತಿ

Akshata Krishnamurthy

ಅಕ್ಷತಾ ಮೈಸೂರಿನಲ್ಲಿ ಜನಿಸಿ, ಬೆಂಗಳೂರಿನಲ್ಲಿ ಬೆಳೆದು, ಸುಮಾರು ಹತ್ತು ವರ್ಷಗಳ ಹಿಂದೆ ಮದುವೆಯಾದ ನಂತರ ಅಮೇರಿಕಾಗೆ ಬಂದಿದ್ದಾರೆ. ಅವರ ಹವ್ಯಾಸಗಳಲ್ಲಿ ಹಾಡುಗಾರಿಕೆ, ನೃತ್ಯ ಮತ್ತು ಚಿತ್ರಕಲೆ ಸೇರಿವೆ. ಅವರು ಕರ್ನಾಟಕ ಸಂಗೀತದಲ್ಲಿ ತಮ್ಮ ಜೂನಿಯರ್ ಹಂತವನ್ನು ಪೂರ್ಣಗೊಳಿಸಿದ್ದಾರೆ.

Shruthi Balakrishnan
Literature Committee

ಶ್ರುತಿ ಬಾಲಕೃಷ್ಣನ್

ಸಾಹಿತ್ಯ ಸಮಿತಿ

Shruthi Balakrishnan

ಶೃತಿ ಅವರು ತಮ್ಮ ಕುಟುಂಬದೊಂದಿಗೆ ಏಳು ವರ್ಷಗಳಿಂದ ಕೊಲೊರಾಡೋದಲ್ಲಿ ವಾಸಿಸುತ್ತಿದ್ದಾರೆ. ಅವರು ಪ್ರಸ್ತುತ ಕೊಲೊರಾಡೋ ರಾಜ್ಯದೊಂದಿಗೆ ಹಿರಿಯ ವ್ಯಾಪಾರ ವಿಶ್ಲೇಷಕರಾಗಿ ಕೆಲಸ ಮಾಡುತ್ತಿದ್ದಾರೆ.

ಕೊಲೊರಾಡೋ ಕನ್ನಡ ಕೂಟವು ಕೊಲೊರಾಡೋದ ಕನ್ನಡಿಗರನ್ನು ಒಂದುಗೂಡಿಸುತ್ತದೆ ಮತ್ತು ಸ್ಥಳೀಯ ಕನ್ನಡಿಗರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸುತ್ತದೆ.

Harish Subraya (Namapu)
Literature Committee

ಹರೀಶ್ ಸುಬ್ರಾಯ

ಸಾಹಿತ್ಯ ಸಮಿತಿ

Harish Subraya (Namapu)

ನಾಮಾಪು ಎಂಬ ಕಾವ್ಯನಾಮದ, ಹರೀಶ್ ಅವರು, ತನ್ನ ಹತ್ತನೇ ತರಗತಿಯವರೆಗೆ ಕನ್ನಡವನ್ನು ಪ್ರಾಥಮಿಕ ಬೋಧನಾ ಭಾಷೆಯಾಗಿ ಕಲಿತರು. 2022ರಲ್ಲಿ 'ಭಕ್ತಿಸಾಗರ' ಹಾಗೂ 'ಗೀತಾ ದರ್ಶನ' ಎಂಬ ಪುಸ್ತಕಗಳನ್ನು ಪ್ರಕಟಿಸಿದರು.

Suma Shekhar
Youth Committee

ಸುಮ ಶೇಖರ್

ಯುವ ಸಮಿತಿ

Suma Shekhar

ಸುಮ ಪೂರ್ಣಕಾಲಿಕ ಉದ್ಯೋಗಸ್ಥೆ ಮತ್ತು ಇಬ್ಬರು ಚುಟುಕು ಮಕ್ಕಳ ತಾಯಿ. ಅವರಿಗೆ ಅನ್ವೇಷಣೆ, ಸ್ವಯಂಸೇವೆ ಮತ್ತು ಸೃಜನಾತ್ಮಕತೆ ಎಂದರೆ ಬಹಳ ಪ್ರೀತಿ!

ನಮ್ಮ ಸಮುದಾಯದ ಜೊತೆ ಕೈಜೋಡಿಸಿ, ಹೊಸ ಪೀಳಿಗೆಗೆ ನಮ್ಮ ಪರಂಪರೆಯನ್ನು ಪರಿಚಯಿಸುವ ಅವಕಾಶ ನನಗೆ ತುಂಬಾ ಸಂತೋಷವನ್ನು ನೀಡುತ್ತದೆ!

Archana Bhatta
Youth Committee

ಅರ್ಚನಾ ಭಟ್ಟ

ಯುವ ಸಮಿತಿ

Archana Bhatta

ಅರ್ಚನಾ ಮೂಲತಃ ನಮ್ಮ ಬೆಂಗಳೂರಿನವರಾಗಿದ್ದು, ತಮ್ಮ ಜೀವನದುದ್ದಕ್ಕೂ ಭಾರತೀಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸಮಿತಿಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅವರು ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ವೀಣೆ ನುಡಿಸುವುದರಲ್ಲಿ ಪ್ರಮಾಣೀಕರಿಸಲ್ಪಟ್ಟಿದ್ದಾರೆ.

ಕೊಲೊರಾಡೋ ಕನ್ನಡ ಕೂಟ ನನ್ನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಒಂದು ವೇದಿಕೆಯಾಗಿದೆ ಮತ್ತು ನನ್ನ ನಾಡಿನ ಸ್ಮೃತಿಗಳನ್ನು ಪ್ರಭಾವಿತಗೊಳಿಸುತ್ತದೆ.

Nitya Maddodi
Sports Committee

ನಿತ್ಯ ಮದ್ದೋಡಿ

ಕ್ರೀಡಾ ಸಮಿತಿ

Nitya Maddodi

ನಿತ್ಯ ಕಳೆದ ಹತ್ತು ವರ್ಷಗಳಿಂದ ಕೊಲೊರಾಡೋದಲ್ಲಿ ವಾಸಿಸುತ್ತಿದ್ದಾರೆ. ಅವರು 'ಪಿಎಚ್‌ಡಿ ಕ್ಲಿನಿಕಲ್ ಸಂಶೋಧನಾ' ವಿಜ್ಞಾನಿ. ಕಾಲೇಜು ದಿನಗಳಲ್ಲಿ ಕ್ರೀಡಾಪಟುವಾಗಿದ್ದ ಇವರು ಈಗಲೂ ಅದೇ ಉತ್ಸಾಹವನ್ನು ಕಾಯ್ದುಕೊಂಡು ದೇಶಾದ್ಯಂತ ಹಲವಾರು ಮ್ಯಾರಥಾನ್‌ಗಳನ್ನು ಪೂರ್ಣಗೊಳಿಸಿದ್ದಾರೆ.

Mohan Kumar
Sports Committee

ಮೋಹನ್ ಕುಮಾರ್

ಕ್ರೀಡಾ ಸಮಿತಿ

Mohan Kumar

ಮೋಹನ್ ಅವರು ಚಿಕ್ಕಮಗಳೂರಿನಲ್ಲಿ ಹುಟ್ಟಿ ಬೆಳೆದವರು. ಅವರು ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಪ್ರಸ್ತುತ ಪಾರ್ಕರ್, ಕೊಲೊರಾಡೋದಲ್ಲಿ ವಾಸಿಸುತ್ತಿದ್ದಾರೆ. ಮೋಹನ್ ಅವರಿಗೆ ಕನ್ನಡ ಸಿನಿಮಾಗಳು ಹಾಗೂ ಹಳೆಯ ಹಾಡುಗಳನ್ನು ಕೇಳುವುದು ಬಹಳ ಇಷ್ಟ.

Birendra Mehta
Sports Committee

ಬೀರೇಂದ್ರ ಮೆಹ್ತಾ

ಕ್ರೀಡಾ ಸಮಿತಿ

Birendra Mehta

ಬೀರೇಂದ್ರ ಮೆಹ್ತಾ ಅವರು ಬೆಂಗಳೂರಿಂದ ಬಂದು ಸೆಂಟೀನಿಯಲ್, ಕೊಲೊರಾಡೋದಲ್ಲಿ 2022ರಿಂದ ವಾಸಿಸುತಿದ್ದಾರೆ. ಅವರಿಗೆ ಕ್ರಿಕೆಟ್ ಹಾಗೂ ಬಾಡ್ಮಿಂಟನ್ ಆಟದ ಮೇಲೆ ಅಪಾರವಾದ ಆಸಕ್ತಿ ಇದೆ.

Ramesh Bheemappa
Media Committee

ರಮೇಶ್ ಭೀಮಪ್ಪ

ಮಾಧ್ಯಮ ಸಮಿತಿ

Ramesh Bheemappa

ರಮೇಶ್ ಮೂಲತಃ ಚಿತ್ರದುರ್ಗದವರಾಗಿದ್ದು, ಓದಿದ್ದು ಬೆಳೆದಿದ್ದು ಶಿವಮೊಗ್ಗ ಮತ್ತು ಬೆಂಗಳೂರಿನಲ್ಲಿ. ಅವರಿಗೆ ಸಿನಿಮಾ, ಕನ್ನಡ ಸಾಹಿತ್ಯ ಮತ್ತು ಫೋಟೋಗ್ರಫಿಯಲ್ಲಿ ಹೆಚ್ಚು ಒಲವು.

Manasa Satyanarayana
Social Media Committee

ಮಾನಸ ಸತ್ಯನಾರಾಯಣ

ಸಾಮಾಜಿಕ ಮಾಧ್ಯಮ ಸಮಿತಿ

Manasa Satyanarayana

ಮಾನಸ ಅವರ ತಾಯ್ನುಡಿ ಕನ್ನಡವಾಗಿದ್ದು, ಈಕೆಗೆ ಕೊಲೊರಾಡೋ ಕನ್ನಡ ಸಮುದಾಯದೊಂದಿಗೆ ಎಂಟು ವರ್ಷಗಳಿಂದ ನಂಟು.

ಕೊಲೊರಾಡೋ ಕನ್ನಡ ಕೂಟ ನಮ್ಮ ಸಂಸ್ಕೃತಿ, ಭಾಷೆ ಮತ್ತು ಪರಂಪರೆಯನ್ನು ಉಳಿಸಿಕೊಂಡು ಹೋಗಲು ಒಂದು ಒಳ್ಳೆಯ ವೇದಿಕೆ ನೀಡುತ್ತದೆ.

Kali Prasad
Membership Committee

ಕಾಳಿ ಪ್ರಸಾದ್

ಸದಸ್ಯತ್ವ ಸಮಿತಿ

Kali Prasad

ಕಾಳಿ ಮೂಲತಃ ತಿಪಟೂರಿನವರಾಗಿದ್ದು, ಕಳೆದ 12 ವರ್ಷಗಳಿಂದ ಕೊಲೊರಾಡೋದಲ್ಲಿ ಅವರ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ರಾಕಿ ಪರ್ವತದ ರಸ್ತೆಗಳಲ್ಲಿ ಮೋಟಾರ್ ಸೈಕಲ್ ಸವಾರಿ ಮಾಡುವುದು ಅವರ ಉತ್ಸಾಹ.

ಕೊಲೊರಾಡೋ ಕನ್ನಡ ಕೂಟ ಗುಂಪಿನಲ್ಲಿ ಭಾಗಿಯಾಗಿರುವುದು ನನ್ನ ವೈಯಕ್ತಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ.

Vasudha Harish
Volunteer Drive Committee

ವಸುಧಾ ಹರೀಶ್

ಸ್ವಯಂಸೇವಕ ಚಾಲನಾ ಸಮಿತಿ

Vasudha Harish

ವಸುಧಾ ಮೂಲತಃ ಮಂಗಳೂರಿನವರು, ಮಂಗಳೂರು ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿದ್ದಾರೆ ಮತ್ತು ಅವರ ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ಇಪ್ಪತ್ತೈದು ವರ್ಷಗಳಿಂದ ಕೊಲೊರಾಡೋದಲ್ಲಿ ವಾಸಿಸುತ್ತಿದ್ದಾರೆ.

Suma Dhanaraj
Volunteer Drive Committee

ಸುಮ ಧನರಾಜ್

ಸ್ವಯಂಸೇವಕ ಚಾಲನಾ ಸಮಿತಿ

Suma Dhanaraj

ಸುಮ ಧನರಾಜ್ ಬೆಳೆದದ್ದು ಮತ್ತು ವಿದ್ಯಾಭ್ಯಾಸ ಮಾಡಿದ್ದು ಸಹ್ಯಾದ್ರಿಯ ಮಡಿಲಾದ ಶಿವಮೊಗ್ಗ ಜಿಲ್ಲೆಯಲ್ಲಿ. ಕಳೆದ ಇಪ್ಪತ್ತೇಳು ವರುಷಗಳಿಂದ ಅವರು ತಮ್ಮ ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ಕೊಲೊರಾಡೋದ ವೆಸ್ಟ್‌ಮಿನ್ಸ್‌ಟರ್ ನಗರದಲ್ಲಿ ನೆಲೆಸಿದ್ದಾರೆ.

Our Legacy

CKK Legacy

Over four decades of preserving and celebrating Kannada culture in Colorado. From humble beginnings in 1975 to becoming one of the most active cultural organizations in the region, CKK has been at the forefront of community building.

  • Hosting annual Ugadi and Rajyotsava celebrations bringing together over 500 Kannada families in Colorado.
  • Operating Kannada Shaale — a weekend language school nurturing Kannada literacy in the next generation.
  • Recognized as a 501(c)(3) nonprofit organization, proudly serving the Kannada-speaking community since 1975.

Become a Member

Support Cultural Events, Shaale,
and Community Programs.